ಕಲಬುರಗಿ, ಜುಲೈ, 07: ಮಹಿಳೆಯರಿಗಾಗಿ ವಿಶೇ ಶೌಚಾಲಯವಿರುವ ಬಸ್ ಹಾಗೂ ಮಗುವಿಗೆ ಹಾಲುಣಿಸುವ ವ್ಯವಸ್ಥೆಯ ಸಂಚಾರಿ ವಾಹನವನ್ನು ಬುಧುವಾರ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷö್ಮಣ ಸವದಿ ಅವರು ಲೋಕಾರ್ಪಣೆ ಮಾಡಿದರು.
ಸಂಸ್ಥೆಯ ಕಾರ್ಯಾಚರಣೆಯಲ್ಲಿ 12.44 ಲಕ್ಷ ಕಿಲೋ ಮೀಟರ್ ಕ್ರಮಿಸಿದ ನಂತರ ನಿಷ್ಕಿçಯಗೊಳಿಸಲಾದ ವಾಹನವನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಮಹಿಳೆಯರ ಉಪಯೋಗಕ್ಕಾಗಿ ಶೌಚಾಲಯ ಕಮ್ ಮಗುವಿಗೆ ಹಾಲುಣಿಸುವ ವ್ಯವಸ್ಥೆಯುಳ್ಳ ಸಂಚಾರಿ ಬಸ್‌ನಲ್ಲಿ ಒಂದು ಪಾಶ್ಚಾತ್ಯ ಶೈಲಿ ಶೌಚಾಲಯ ಸೇರಿ ಮೂರು ಶೌಚಾಲಯಗಳು, ಬಾತ್ ರೂಂ, ಮಗುವಿಗೆ ಹಾಲುಣಿಸುವ ವ್ಯವಸ್ಥೆ ಮಾಡಲಾಗಿದೆ.
ಸ್ಯಾನಿಟರಿ ನ್ಯಾಪಕಿನ್ ಮಷಿನ್, ಸ್ಯಾನಿಟರಿ ನ್ಯಾಪಕಿನ್ ವಿಲೇವಾರಿ ಮಷಿನ್, ಹ್ಯಾಂಡ್ ವಾಷ್ ಬೆಸಿನ್, ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ವಿದ್ಯುತ್ ಹಾಗೂ ಲೈಟ್ ಸೌಲಭ್ಯಗಳನ್ನು ಈ ಬಸ್ ಹೊಂದಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ಈ ಬಸ್ ಕೇವಲ ಕಲಬುರಗಿ ನಗರದಲ್ಲಿ ಮಾತ್ರ ಸಂಚರಿಸುತ್ತದೆ. ಯಾವ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಆ ಸ್ಥಳಕ್ಕೆ ಈ ಬಸ್ ಕಳುಹಿಸಲಾಗುವುದು. ಈ ಬಸ್‌ನ ವೆಚ್ಚ 9.60 ಲಕ್ಷ ಆಗಿದ್ದು, ಆಕರ್ಷಕ ಹೊರಮೈ ಮತ್ತು ಒಳಮೈ ಒಳಗೊಂಡಿದೆ.