ನಗರದದ ಗಾಜೀಪುರ ಬಡಾವಣೆಯಲ್ಲಿ ಹಾಡುಹಗಲೆ ಮನೆಗೆ ಕನ್ನ:95 ಗ್ರಾ. ಬಂಗಾರ ಕಳುವು

0
1497

ಕಲಬುರಗಿ, ಜೂನ್. 14: ರಾತ್ರಿ ಹೊತ್ತಿ ಯಾರು ಇಲ್ಲದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಜನನೀಬಿಡ ಪ್ರದೇಶದಲ್ಲಿ ಹಾಡುಹಗಲೇ ನಿನ್ನ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ.
ನಗರದ ಜಗತ್ ಅಂಚೆ ಕಛೇರಿ ಹಿಂದುಬದಿಯ ಇಕ್ಕಟ್ಟಾದ ನಾಲ್ಕು ಅಂತಸ್ತಿನ ಮನೆಗೆ ನಿನ್ನೆ ಸುಮಾರು 530 ಗಂಟೆಗೆ ನುಗ್ಗಿದ ಕಳ್ಳರು ಬಾಗಿಲು ಬೀಗ ಒಡೆದು, ಒಳ ನುಗ್ಗಿ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೊನೆಗೆ ಕೈಗೆ ಸಿಕ್ಕ ಬಂಗಾರವನ್ನು ದೋಚಿಕೊಂಡ ಪರಿಯಾಗಿದ್ದಾರೆ.

ಅಂಬಾಲಾಲ ತಾಪಸೆ ಎಂಬುವರು ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಕಳೆದ ನಾಲ್ಕು ತಿಂಗಳಿAದ ಬಾಡಿಗೆಗಿದ್ದರು. ನಿನ್ನೆ ನಗರದ ಹಿರಾಪೂರ ಬಡಾವಣೆಯಲ್ಲಿ ಹುಟ್ಟು ಹಬ್ಬದ ಸಮಾರಂಭಕ್ಕೆ ಹೆಂಡತಿ ಮಗುವಿನೊಂದಿಗೆ ಹೋಗಿ ಸಂಜೆ 7ರ ಸುಮಾರಿಗೆ ಮನೆಗೆ ಬಂದಾಗ ಬಾಗಿಲು ತೆರೆದಿದ್ದನ್ನು ನೀಡಿ ಕೂಡಲೇ ಪೋಲಿಸರಿಗೆ ದೂರು ನೀಡಿದರು.
ಮನೆಯ ಸಣ್ಣ ಡಬ್ಬಾ ಒಂದರಲ್ಲಿ ಇಟ್ಟಿದ್ದ ಒಂಬತ್ತುವರೆ ತೊಲೆ ಅಂದರೆ 95 ಗ್ರಾಮ ಬಂಗಾರ ಕಳ್ಳತನ ಮಾಡಲಾಗಿದೆ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮತ್ತೆ ಯಾವುದೇ ವಸ್ತುಗಳು ಕಳ್ಳತವಾಗಿಲ್ಲ ಎಂದು ತಿಳಿಸಲಾಗಿದೆ.
ಕೂಡಲೇ ಸ್ಥಳಕ್ಕೆ ದಾವಿಸಿದ ಬ್ರಹ್ಮಪೂರ ಪೋಲಿಸ್ ಇನ್ಸ್ ಪೇಕ್ಟರ್ ಕಪೀಲದೇವ ಅವರು ಸಿಬ್ಬಂದಿಯೊAದಿಗೆ ಪರಿಶೀಲಿಸಿ, ನಂತರ ಬೆರಳು ಮುದ್ರಕ ಹಾಗೂ ಪೋಲಿಸ್ ಸ್ವಾನ ದಳವನ್ನು ಕರೆಯಿಸಿ ಸ್ಥಳವೆಲ್ಲ ಮಹಜರು ಮಾಡಿದರು.
ನಂತರ ಘಟನಾ ಸ್ಥಳಕ್ಕೆ ಎಸಿಪಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಘಟನೆಯ ವಿವರ ಪಡೆದು, ಕೂಡಲೇ ತನಿಖೆ ನಡೆಸಲು ಆದೇಶ ನೀಡಿದರು.
ಈ ಬಗ್ಗೆ ನಗರದ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣದ ಅಡಿ ಗುನ್ಹೆ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here