ರಾಜ್ಯದಲ್ಲಿ ಕೊರೊನಾ ಪಾಸಿಟೀವಿಟಿ ರೆಟ್ 14.68ಕ್ಕೆ ಇಳಿಕೆ

0
676

ಬೆಂಗಳೂರು, ಮೇ.30-ರಾಜ್ಯದಲ್ಲಿ ಕೊರೊನಾ ಪಾಸಿಟೀವಿಟಿ ರೆಡ್ಡಿ ನಿನ್ನಗೆ ಹೊಲಿಸಿದರೆ ಇಂದು 14.68ಕ್ಕೆ ಇಳಿದಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೊರೊನಾ ಹೊಸ ಪ್ರಕರಣಗಳ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜೂನ್ 15ರ ವರೆಗೆ ಶೇ. 90ರಷ್ಟು ಕೊರೊನಾ ಸಕ್ರೀಯ ಪ್ರಕರಣಗಳು ಕಡಿಮೆಯಾಗಲಿವೆ.
ರಾಜ್ಯದಲ್ಲಿ ರವಿವಾರ ಕೂಡ ಚೇತರಿಕೆ ಪ್ರಮಾಣ ಏರಿಕೆಯಾಗಿದೆ. 28053 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ 221717 ಮಂದಿ ಗುಣಮುಖರಾಗಿದ್ದಾರೆ.
20378 ಜನರಿಗೆ ಹೊಸ ಸೋಂಕು ತಗುಲಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 342010 ಕ್ಕೆ ಏರಿಕೆಯಾಗಿದೆ. ನಿನ್ನೆ ರಾಜ್ಯದಲ್ಲಿ ಏರಿಕೆ ಕಂಡಿದ್ದ ಸಾವಿನ ಸಂಖ್ಯೆ ಇಂದು ಇಳಿಕೆಯಾಗಿದ್ದು, ಇಂದು 382 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 28679 ಕ್ಕೆ ಹೆಚ್ಚಳವಾಗಿದೆ.
ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2857825ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಒದಗಿಸಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು ಇಂದು ನಗರದಲ್ಲಿ ನಿನ್ನೆ 278 ಮಂದಿ ಮೃತಪಟ್ಟಿದ್ದರು. ಇಂದು 213 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ
ಒಟ್ಡು ಮೃತರ ಸಂಖ್ಯೆ 13104 ಏರಿಕೆಯಾಗಿದೆ.
ಇಂದು 4734 ಮಂದಿಗೆ ಹೊಸ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1159237 ಕ್ಕೆ ಹೆಚ್ವಳವಾಗಿದೆ. ಇಂದು ನಗರದಲ್ಲಿ 6078 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ 983507 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಸಕ್ರಿಯ ಪ್ರಕರಣಗಳು 162635ಕ್ಕೆ ಏರಿಕೆಯಾಗಿದೆ.

ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1,171, ಬೆಂಗಳೂರು ಗ್ರಾಮಾಂತರ 392, ಬೆಂಗಳೂರು ನಗರ 4,734, ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356, ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727, ದಾವಣಗೆರೆ 698, ಧಾರವಾಡ 525, ಗದಗ 289, ಹಾಸನ 2,227, ಹಾವೇರಿ 206, ಕಲಬುರಗಿ 107, ಕೊಡಗು 271, ಕೋಲಾರ 341, ಕೊಪ್ಪಳ 365, ಮಂಡ್ಯ 643, ಮೈಸೂರು 1,559, ರಾಯಚೂರು 278, ರಾಮನಗರ 164, ಶಿವಮೊಗ್ಗ 386, ತುಮಕೂರು 773, ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198 ಮತ್ತು ಯಾದಗಿರಿಯಲ್ಲಿ 107 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here