ಕಲಬುರಗಿ:ಮೇ.30: ದೇಶದಲ್ಲಿಯೇ ಕೊರೊನಾಗೆ ಮೊದಲ ಬಲಿಯಾಗಿದ್ದು, ಕಲಬುರಗಿಯಲ್ಲಿಯೇ ಇದರಿಂದ ಸುದ್ದಿಯಲ್ಲಿದ್ದ ಜಿಲ್ಲೆಯಲ್ಲಿ ಕೋವಿಡ್‌ನ 2ನೇ ಅಲೇಯಲ್ಲಿಯೂ ಮುಂಚೂಣಿಯಲ್ಲಿದ್ದ ಜಿಲ್ಲೆ ಈಗ ಅತ್ಯಂತ ಕಡಿಮೆ ಸೋಂಕಿತರಿರುವ ಜಿಲ್ಲೆಯಾಗಿದೆ.
ದಿನೇ ದಿನೇ ಜಿಲ್ಲೆಯಲ್ಲಿ ಕೊರಾನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ 14 ದಿನಗಳಿಂದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬAದಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರಿರುವ ಜಿಲ್ಲೆ ಬೆಂಗಳೂರಾದರೇ, ಕಲಬುರಗಿ, ಅತೀ ಕಡಿಮೆ ಸೋಂಕಿತರ ಸಂಖ್ಯೆ ಹೊಂದಿದ ಮೂರನೇ ಜಿಲ್ಲೆಯಾಗಿದೆ, ಪ್ರಥಮವಾಗಿ ಬೀದರ ಜಿಲ್ಲ (396), ಎರಡನೇ ಕಡಿಮೆ ಪ್ರಕರಣಗಳು ಹೊಂದಿದ ಜಿಲ್ಲೆ ವಿಜಯಪುರ ಇಲ್ಲಿ 1997 ಹಾಗೂ ಕಲಬುರಗಿಯಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 2012 ಆಗಿದೆ. ಪ್ರಕರಣಗಳು ಹಾಗೂಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 107 ಪಾಸಿಟಿವ್ ರವಿವಾರದ ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನಲ್ಲಿ 107 ಜನರಿಗೆ ಹೊಸದಾಗಿ ಕೊರೊನಾ ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
04 ಜನರು ಸಾವಿಗೀಡಾಗಿದ್ದಾರೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 59981 ಪಾಸಿಟಿವ್ ಕೇಸ್‌ಗಲಾದಂತಾಗಿದೆ.
299 ಜನ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ.ಇಂದು ಪಾಸಿಟಿವ್ ಗಿಂತ ಆಸ್ಪತ್ರೆಯಿಂದ ಬಿಡುಗಡೆ ಯಾದವರೆ ಅಧಿಕವಾಗಿದ್ದಾರೆ. ಈ ವರೆಗೆ 57203 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
2012 ಜನ ಸಕ್ರಿಯ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 04 ಜನರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಂದು 04 ಜನರ ಸಾವಿನೊಂದಿಗೆ ಈ ವರೆಗೆ 766 ಜನರು ಸಾವಿಗೀಡಾದಂತಾಗಿದೆ .
Home COVID NEWS ಕಲಬುರಗಿಯಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ಮಹಾಮಾರಿ ಕೊರೊನಾ ಹಾವಳಿ ಇಂದೂ ಸಹ 107 ಹೊಸ ಪ್ರಕರಣಗಳ...