ರಾಜ್ಯದಲ್ಲಿ ರವಿವಾರ ತಗ್ಗಿದ ಕೊರೊನಾ ಹಾವಳಿ ಹೊಸದಾಗಿ 25 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

0
825

ಬೆಂಗಳೂರು, ಮೇ. 23:ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳೆಕೆ ಕಂಡುಬAದಿದ್ದು, ರವಿವಾರ ಆರೋಗ್ಯ ಇಲಾಖೆ ಪ್ರಕಟಸಿಸಿದ ಸಂಜೆ ಬುಲೆಟಿನ್‌ನಲ್ಲಿ 25929 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.
15 ರಿಂದ 20 ಸಾವಿರ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳ ವರದಿಯಾಗುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಇಂದು 7494 ಜನರಿಗೆ ಮಾತ್ರ ಸೋಂಕು ತಗುಲಿದ್ದು, 12407 ಜನರಉ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ನೋಡಿದರೆ ರಾಜ್ಯದಲ್ಲಿ ಸರಕಾರ ತಂದ ಲಾಕ್‌ಡೌನ್ ಯಶಸ್ವಿಯಾದಂತಾಗಿದೆ.
ರಾಜ್ಯದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35573 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟು ಈವರೆಗೆ ರಾಜ್ಯದಲ್ಲಿ 2424904 ಜನರಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ವರದಿಯಾಗಿದ್ದು, ಅದರಲ್ಲಿ 1926615 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಒಟ್ಟು 472986 ಸಕ್ರೀಯ ಪ್ರಕರಣಗಳಿವೆ.
ಇಂದು 356 ಜನರ ಮರಣ ಸೇರಿದಂತೆ 25 ಸಾವಿರ 282 ಜನರು ಈವರೆಗೆ ಕೊರೊನಾಗೆ ಬಲಿಯಾದಂತಾಗಿದೆ.
ಕೊರೊನಾಗೆ ಬೆಂಗಳೂರಿನಲ್ಲಿ ಇಂದು ಅತೀ ಹೆಚ್ಚು 362 ಜನರ ಸಾವು
ರಾಜ್ಯದಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯಾಗುತ್ತಿದ್ದರೂ ಸಹ ಸಾವಿನ ಪ್ರಕರಣಗಳು ಮಾತ್ರ ಗಣನೀಯವಾಗಿ ಏರಿಕೆ ಯಾಗುತ್ತಿದೆ.
ರಾಜ್ಯದಲ್ಲಿ ಇಂದು ಒಟ್ಟು 626 ಜನರು ಬಲಿಯಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 30 ಜನ, ಮೈಸೂರಿನಲ್ಲಿ 22 ಮಂದಿ, ಉತ್ತರ ಕನ್ನಡದಲ್ಲಿ 17, ಕಲಬುರಗಿಯಲ್ಲಿ 15, ಶಿವಮೊಗ್ಗ, ತುಮಕೂರು, ಬೆಳಗಾವಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತಲಾ 13 ಜನರು ಸಾವಿಗೀಡಾಗಿದ್ದು, ಉಳಿದಂತೆ ಕೊಪ್ಪಳದಲ್ಲಿ 12, ಹಾಸನದಲ್ಲಿ 11 ಮಂದಿ ಬಲಿಯಾಗಿದ್ದು, ಉಳಿದ 18 ಜಿಲ್ಲೆಗಳಲ್ಲಿ ಒಂದಕ್ಕಿ ಸಂಖ್ಯೆಯಲ್ಲಿ ಕೊರನಾಗೆ ಜನರು ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here