ಕಲಬುರಗಿ, ಮೇ. 23: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಕ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತ ಬಂದಿದ್ದು, ಕಳೆದ ಒಂದು ವಾರದಲ್ಲಿ (ಸೋಮವಾರದಿಂದ) ಇಲ್ಲಿಯವರೆಗೆ ಒಟ್ಟು 3356 ಜನರಿಗೆ ಕೊರನಾ ಪಾಸಿಟೀವ್ ಬಂದಿದ್ದು, ಈ ಸಂಖ್ಯೆ ನೋಡಿದಾಗ ಜಿಲ್ಲೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕೊರೊನಾ ಪಾಸಿಟೀವ್ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದರೂ ಕೂಡಾ ಸಾವಿನ ಪ್ರಮಾಣ ಮಾತ್ರ ಹೆಚ್ಚಾಗಿದೆ. ಒಂದು ವಾರದಲ್ಲಿ ಕೋವಿಡ್‌ಗೆ ಒಟ್ಟು 72 ಜನರು ಬಲಿಯಾಗಿದ್ದಾರೆ.
ರವಿವಾರ ಆರೋಗ್ಯ ಇಲಾಖೆಯ ಸಂಜೆ ಕೊರೊನಾ ಬುಲೆಟಿನ್ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 277 ಜನರಿಗೆ ಕೊರೊನಾ ಪಾಸಿಟೀವ್ ಬಂದಿದ್ದು, ಇಂದು ಸಹ 15 ಜನರು ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆ ಕಡಿಮೆ ಪಾಸಿಟೀವ್ ಸಂಖ್ಯೆಯಿರುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲನೆಯದಾಗಿ ಇಂದು ಬೀದರ ಜಿಲ್ಲೆಯಲ್ಲಿ 49 ಪ್ರಕರಣಗಳು ವರದಿಯಾಗಿ ಮೊದಲನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 58938 ಜನರು ಸೋಂಕಿಗೆ ಒಳಗಾಗಿದ್ದು, ಇಂದು ಆಸ್ಪತ್ರೆಯಿಂದ 580 ಜನರು ಬಿಡುಗಡೆ ಹೊಂದಿದ್ದು, ಇಂದು ಸೇರಿದಂತೆ ಒಟ್ಟು ಇಲ್ಲಿಯವರೆಗೆ 52941 ಸೋಂಕಿತರು ಬಿಡುಗಡೆಯಾದಂತಾಗಿದೆ.
5277 ಸಕ್ರೀಯ ಪ್ರಕರಣಗಳು ಇದ್ದು, ಇಂದು 7 ಜನರ ಸಾವು ಸೇರಿದಂತೆ ಇಲ್ಲಿಯವರೆಗೆ ಒಟು 720 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಒಂದು ವಾರದ ಕೊರೊನಾ ಸೋಂಕಿನ ವಿವರ :
ಸೋಮವಾರ 654, 10 ಸಾವು, ಮಂಗಳವಾರ 695, 15 ಸಾವು, ಬುಧುವಾರ 548, 7 ಸಾವು, ಗುರುವಾರ 440, 18 ಸಾವು, ಶುಕ್ರವಾರ 399, 11 ಸಾವು, ಶನಿವಾರ 352. 4 ಸಾವು ರವಿವಾರ 277,15 ಸಾವು ಪ್ರಕರಣಗಳು ದಾಖಲಾಗಿವೆ.