ಬೆಳಗಾವಿ ಲೋಕಸಭಾ ಹಾಗೂ ಬಸವಕಲ್ಯಾಣ, ಮಸ್ಕಿ ವಿಧಾನಸಭೆಗಳಿಗೆ ಎಪ್ರಿಲ್ 17ರಂದು ಉಪಚುನಾವಣೆ

0
998

ನವದೆಹಲಿ, ಮಾ. 16: ರಾಜ್ಯದ ಬೆಳಗಾವಿ ಹಾಗೂ ಆಂದ್ರ ಪ್ರದೇಶದ ತಿರುಪತಿ ಲೋಕಸಭೆಯ ತೆರವಾದ ಸ್ಥಾನಗಳಿಗೆ ಎಪ್ರಿಲ್ 17ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಮಾರ್ಚ 23ರಂದು ಚುನಾವಣೆಗಾಗಿ ಅಧಿಸೂಚನೆ ಹೊರಬಿಳಲಿದ್ದು, ಮಾರ್ಚ 30ರ ವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ. 2ರಂದು ಫಲಿತಾಂಶ ಹೊರಬಿಳಲಿದೆ.
2 ಲೋಕಸಭೆ ಸೇರಿದಂತೆ ದೇಶದ ಇತರ ಒಟ್ಟು 14 ವಿಧಾನಸಭೆ ಸ್ಥಾನಗಳಿಗೂ ಕೂಡ ಎಪ್ರಿಲ್ 17ರಂದೇ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಕಳೆದ ವರ್ಷ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ ಅಂಗಡಿ ಅವರು ನಿಧನಹೊಂದಿದ್ದ ಪ್ರಯುಕ್ತ ಈ ಸ್ಥಾನಕ್ಕೆ ಹಾಗೂ ತಿರುಪತಿ ಮೀಸಲು ಲೋಕಸಭೆಯ ಸದಸ್ಯ ಬಲ್ಲಿ ದುರ್ಗಾ ಪ್ರಸಾದ ರಾವ ಅವರು ಕೂಡ ಕಳೆದ ವರ್ಷ ನಿಧನ ಹೊಂದಿದ್ದ ಪ್ರಯುಕ್ತ ತೆರವಾದ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬೆಳಗಾವಿ ಲೋಕಸಭೆ ಬಿಜೆಪಿ ಮತ್ತು ತಿರುಪತಿ ಲೋಕಸಭೆ ಸ್ಥಾನ ಈ ಮೊದಲು ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ ಹೊಂದಿತ್ತು.
ಕರ್ನಾಟಕದ ಬಸವಕಲ್ಯಾಣ ಮತ್ತು ಮಸ್ಕಿ ಮೀಸಲು ವಿಧಾನಸಭಾ ಸ್ಥಾನಗಳಿಗೂ ಎಪ್ರಿಲ್ 17ರಂದು ಮತದಾನ ನಡೆಯಲಿದೆ.
ದೇಶದ ಇತರ ಗುಜರಾತ, ಜಾರ್ಖಂಡ, ಮಧ್ಯ ಪ್ರದೇಶ, ಮಹಾರಾಷ್ಟç, ಮಿಜೋರಂ, ನಾಗಾಲ್ಯಾಂಡ್, ಒಡಿಸಾ, ರಾಜಸ್ಥಾನ (3) ತೆಲಗಾಂಣ ಮತ್ತು ಉತ್ತರಾಖಂಡನ ಒಂದೊAದು ತೆರವಾದ ವಿಧಾನಸಭಾ ಸ್ಥಾನಗಳಿಗೆ ಚುನಾವಣೆಯನ್ನು ಕೂಡಾ 17ರಂದೆ ನಡೆಯಲಿದೆ.
ಮೇ 4ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

LEAVE A REPLY

Please enter your comment!
Please enter your name here