ಚಿಕಿತ್ಸೆಯಿಂದ ಗುಣಮುಖರಾದ ಕ್ಷಯರೋಗಿಗಳು ಬೇರೆಯವರಿಗೆ ಮಾದರಿಆಗಬೇಕು:ಡಾ.ಸುಧಾರಾಣಿ

0
1246

ಚಿತ್ತಾಪೂರ, ಫೆ. 22: ಕ್ಷಯರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರು ಅತ್ಮಸ್ಥೈರ್ಯದಿಂದ ಬೇರೆ ಕ್ಷಯರೋಗಿಗಳಿಗೆ ಮಾದರಿ ಅಗಬೇಕು. ಹೊಸ ಜೀವನ ನಡೆಸುವಂತಾಗಬೇಕು ಅಂದಾಗಲೇ ಇದರಿಂದ ಪ್ರೇರೆಪಿತರಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಾಲೂಕ ಮಾನಕಸಿಕ ಆರೋಗ್ಯ ವ್ಯೆದ್ಯರಾದ ಡಾ. ಸುಧಾರಾಣಿ ನಾಯಕ್ ಅವರು ಹೇಳೀದ್ದಾರೆ.
ನಗರದ ತಾಲ್ಲೂಕ ಸಾರ್ವಜನಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಕ್ಷಯರೋಗ ನಿರ್ಮೂಲನ ಕೇಂದ್ರ ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ ಕ್ಷಯರೋಗಿಗಳಗಾಗಿ ಗುಣಮುಖರಾದವರಿಗೆ ಧೈರ್ಯ ತುಂಬುವ ಕಾರ್ಯಕ್ರಮ ಟಿಬಿ ಚಾಂಪಿಯನ್ ವಾಕ್ಯದೊಂದಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿ ತಾಲ್ಲೂಕ ಆರೋಗ್ಯ ಕ್ಷೇತ್ರಶಿಕ್ಷಣಾಧಿಕಾರಿ ಸುನಂದಾ ಮಾತನಾಡಿದ ಕ್ಷಯರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸುತ್ತ ಇತರರಿಗೆ ಮಾದರಿ ಅಗಬೇಕು, ಈ ಹಿಂದೆ ಕ್ಷಯರೋಗ ಎನ್ನುವುದು ಮಹಾಮರಿ ಭಯಾನಕ ರೋಗ ಎನ್ನುತ್ತಿದ್ದರು ಅದರೆ ಇಗಿನ ದಿನ ಮಾನಗಳಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ನಮ್ಮ ಮನೆಯವರಂತೆ ನಿಮ್ಮನ್ನು ಕಂಡು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿತ್ಯ ನಿಮಗೆ ಔಷಧೋಪರಚಾರ ಮಾಡುವ ಮೂಲಕ ಅದರಲ್ಲೂ ನೀವು ಕೂಡ ಸರಿಯಾಗಿ ಮಾತ್ರೆ ತೆಗೆದುಕೊಂಡು ಪೂರ್ಣ ಪ್ರಮಾಣದ ಸೂಕ್ತಚಿಕಿತ್ಸೆಗೆ ಸ್ಪಂದಿಸುವುದರೊAದಿಗೆ ಗುಣಮುಖರಗಿದ್ದೀರಿ, ಇದು ಸಂತೋಷದ ಘಳಿಗೆ. ಹಾಗೆ ಪೌಷ್ಠಿಕಾಂಶದ ಆಹಾರ ಸೇವೆ ಬಹಳ ಮುಖ್ಯ ದಿನಾಲು ಚನ್ನಾಗಿ ಊಟಮಾಡಿ ಎಂದು ಸಲಹೆ ನೀಡಿದ ಅವರು ಕೊರೊನಾ ಮಹಾಮಾರಿ ಬಗ್ಗೆಯೂ ಸಲಹೆ ನೀಡಿ, ಮಾಸ್ಕ್ ಧರಿಸಬೇಕು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆಗಾಗ ಸಾಬೂನಿನಿಂದ, ಕೈ ತೊಳೆದಕೊಂಡಲ್ಲಿ ಮಾತ್ರ ಕೊರೊನಾ ದಿಂದ ದೂರವಿಡಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಅತಿಥಿ ಜಿಲ್ಲಾ ಡಿ ಅರ್ ಟಿಬಿ ಸಕ್ಷಮ್ ಪರ್ವ ಟೀಸ್ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಸೈಕಿಯಾಟ್ರಿಕ್ ಅಪ್ತ ಸಮಾಲೋಚಕಿ ಸುಹಾಸಿನಿ. ಆರ್ ಕೆ ಎಸ್ ಕೆ. ಆಪ್ತ ಸಮಾಲೋಚಕಿ ಕಾಳಮ್ಮ ಸ್ವಾಮಿ ಇದ್ದರು.
ಅಧ್ಯಕ್ಷತೆ ವಹಿಸಿದ ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕ ಉದಯಕುಮಾರ್ ಭಾಗೋಡಿ ಅವರು ಮಾತನಾಡುತ್ತಾ ಕ್ಷಯರೋಗ ಮುಕ್ತ ವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯರೋಗಿ ತಪ್ಪದೆ ಡಾಟ್ಸ್ ಸೆಂಟರ್ಗೆ ಬಂದು ಉಚಿತ ಚಿಕಿತ್ಸೆ ಇದೆ ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗಿ ಬಹು ಬೇಗ ಗುಣ ಮುಖನಾಗಲು ಸಾಧ್ಯ ಹಾಗೆ ಕ್ಷಯರೋಗ ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಟಿಬಿಯಿಂದ ಗುಣಮುಖರಾದ ಚಾಂಪಿಯನ್‌ಗಳಿಗೆ ಸತ್ಕಾರಿಸಲಾಯಿತು. ಮಂಜುನಾಥ ಅವರು ಕಾರ್ಯಕ್ರಮದ ಸ್ವಾಗತದೊಂದಿಗೆ ನಿರೂಪಿಸಿದರು. ಕೊನೆಯಲ್ಲಿ ಮುನಾವರ್ ಹುಸೇನ್, ಕಾಳಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಷಯರೋಗಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here