ಬಿಆರ್. ಪಾಟೀಲರಿಗೆ ಸಂಸ್ಕೃತಿಯೇ ಇಲ್ಲ:ರದ್ದೇವಾಡಗಿ

0
1432

ಕಲಬುರಗಿ, ಜ. 20: ವಿಶಾಲವಾದ ವೀರಶೈವ ಲಿಂಗಾಯತ ಪರಂಪರೆಯು ತನ್ನನ್ನು ಪ್ರೀತಿಸಿ ಇತರರನ್ನು ಗೌರವಿಸಿ ಅಂತ ಹೇಳಿದೆ, ಆದರೆ ಅದಕ್ಕೆ ತದ್ವಿರುದ್ಧವಾಗಿ ಶ್ರೀ ರಾಮ ಮಂದಿರಕ್ಕೆ ದೇಣಿಗೆ ನೀಡಬೇಡಿ ಎಂದು ಹೇಳಿಕೆ ನೀಡಿರುವ ಆಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ್‌ರಿಗೆ ಸಂಸ್ಕೃತಿಯೇ ಇಲ್ಲವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅವರು ಇಂದಿಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಇತ್ತೀಚಿಗೆ ಕೂಡಲ ಸಂಗಮದಲ್ಲಿ ಜರುಗಿದ ಶರಣಮೇಳ ಕಾರ್ಯಕ್ರಮದಲ್ಲಿ ಪಾಟೀಲರು ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಶಾಂತಿ ಕದಡಿಸುವ ಹೇಳಿಕೆ ನೀಡುತ್ತಿದ್ದು, ಅವರ ಮೇಲೆ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರಾಮಮಂದಿರದ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದು ಅವರು ಕಾಂಗ್ರೆಸ್ ನಾಯಕರನ್ನು ಆಗ್ರಹಿಸಿದ್ದಾರೆ.
ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವರವರಿಗೆ ಬಿಟ್ಟ ವಿಷಯ ಅದರೆ ಬಿ ಆರ್ ಪಾಟೀಲರು ತಮಗೆ ಸರಿ ಏನಿಸಿದ್ದನ್ನು ಎಲ್ಲರೂ ಒಪ್ಪಬೇಕೇಂದು ಬಯಸುವುದು ತಪ್ಪಲ್ಲವೇ. ಒಂದು ಸಿದ್ಧಾಂತವನ್ನು ಒತ್ತಾಯಪೂರ್ವಕವಾಗಿ ಹೇರುವುದರಿಂದ ಅವರ ಧಾರ್ಮಿಕ ಸ್ವಾತಂತ್ರö್ಯವನ್ನು ಕಸಿದುಕೊಂಡAತಾಗುವುದಿಲ್ಲವೇ?. ಮುಸ್ಲಿಂರನ್ನು ಒಲೈಕೆ ಮಾಡುವ ಸಲುವಾಗಿ ತಾವು ತಾವು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಕೇವಲ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿರುವ ರದ್ದೇವಾಡಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಬಿ ಆರ್ ಪಾಟೀಲರಿಗೆ ರಾಮ ಭಕ್ತರ ಮತಗಳು ಬೇಕಾಗಿಲ್ಲವೇ? ಕಾಂಗ್ರೆಸನವರಿಗೆ ಹಿಂದೂಗಳ ಭಾವನೆ ಅರ್ಥವಾಗುತ್ತಿಲ್ಲವೇ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಈ ರೀತಿ ಸಮಾಜ ಒಡೆಯುವ ಹೇಳಿಕೆಗಳನ್ನು ನೀಡಿ ದ್ವೇಷ ಹರಡಿಸುವವರ ವಿರುದ್ಧ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಿ ಇಲ್ಲವಾದರೇ ರಾಮ ಮಂದಿರದ ಕುರಿತು ನಿಮ್ಮ ನಿಲುವು ಸ್ಪಷ್ಟಪಡಿಸಿ. ಆದರೆ ತಾವು ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಪ್ರತ್ಯೇಕ ಲಿಂಗಾಯತ ಧರ್ಮದ ಚಳುವಳಿಯಲ್ಲಿ ದೇವರೇ ಇಲ್ಲ ಎಂದು ಹೇಳಿದ್ದೀರಿ ಅದರೆ ಈಗ ಮಾತ್ರ ವರಸೆ ಬದಲಿಸಿ ಮಾತನಾಡುತ್ತಿದ್ದೀರಿ. ಕಾಂಗ್ರೆಸ್ ಈ ಹಿಂದೆ ಜಾತಿ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಿರುವುದನ್ನು ಜನ ಕಂಡಿದ್ದಾರೆ ಆದರೆ ತಾವು ಇನ್ನೂ ಮುಂದುವರೆದು ದೇವರು ಮತ್ತು ಭಕ್ತರನ್ನು ರಾಜಕಾರಣಕ್ಕೆ ಬಳಸುತ್ತಿದ್ದೀರಿ. ವೀರಶೈವ ಲಿಂಗಾಯತ ಧರ್ಮ ಒಡೆಯುವುದಕ್ಕೆ ಬಸವಣ್ಣನವರನ್ನು ಮುಂದೆ ಮಾಡಿದ್ದೀರಿ ಈಗ ಶಿವ, ರಾಮ ಮತ್ತು ಕೃಷ್ಣನನ್ನು ಬಳಸುತ್ತಿದ್ದೀರಿ ಇದು ನಿಮ್ಮ ದ್ವಂದ್ವ ನೀತಿ ಅಲ್ಲವೇ? ಎಂದು ಪ್ರಶ್ನಿಸಿದರು.
ಇಷ್ಟು ದಿನ ಬಸವ ತತ್ವ ಹೇಳುತ್ತಿರುವ ನಿಮಗೆ ಈಗ ಶಿವ ತತ್ವ ನೆನಪಾಗುತ್ತಿದೇಯಾ. ಪ್ರಭು ಶ್ರೀರಾಮ ಚಂದ್ರನು ಜಗತ್ತಿನಲ್ಲಿಯೇ ಆದರ್ಶಪ್ರಾಯನಾಗಿ ಪೂಜಿಸಲ್ಪಡುತ್ತಿದ್ದಾನೆ. ರಾಮನಿಗೆ ಪರ್ಯಾಯವಾಗಿ ಶಿವನನ್ನು ಕಾಣುತ್ತಿರುವುದು ದುರ್ದೈವ. ತಾವೇ ಹೇಳಿದ ಹಾಗೆ ಶಿವಮಂದಿರ ನಿರ್ಮಾಣಕ್ಕೆ ಮುಂದಾದರೇ ನಾವು ಅದರ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡುತ್ತೇವೆ. ಧರ್ಮ ಸಂಸ್ಕೃತಿ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಒಂದಿಲ್ಲ ಆದರೆ ತಾವು ಮಾತ್ರ ತಮ್ಮ ರಾಜಕೀಯ ಲಾಭಕ್ಕಾಗಿ ಅವು ಎರಡು ಬೇರೆ ಬೇರೆ ಎಂದು ವಿಂಗಡಿಸುತ್ತಿದ್ದಾರೆ ಎಂದರು.
ಬಸವತ್ತ÷್ವದಲ್ಲಿ ಮೂರ್ತಿ ಪೂಜೆಗೆ ನಿಷೇಧವಿದ್ದರೂ ಶಿವನ ಮೂರ್ತಿ ಪ್ರತಿಷ್ಠಾಪಿಸಲು ಸಲಹೆ ನೀಡುತ್ತಿರುವ ಪಾಟೀಲರ ಇಬ್ಬಗೆ ನೀತಿ ತೋರಿಸುತ್ತದೆ. ಈ ಹಿಂದೆ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಹೇಳುತ್ತಿದ್ದ ಬಿ. ಆರ್. ಪಾಟೀಲರು, ಈಗ ಮತ್ತೆ ಒಂದೇ ಎಂದು ಹೇಳುತ್ತಿದ್ದುದ್ದು ಸಮಾಜದ ಸೌಹಾರ್ದ ಕೆಡಿಸುವ ಹುನ್ನಾರವಾಗಿದೆ ಎಂದರು.
ಧರ್ಮದ ಹೆಸರಿನಲ್ಲಿ ರಾಷ್ಟç ಒಡೆಯುವುದು ಎಷ್ಟು ಸರಿ, ಪಾಟೀಲರ ಹೇಳಿಕೆ ರಾಷ್ಟçದ್ರೋಹದ ಕೆಲಸವಲ್ಲದೇ ಮತ್ತೇನು?. ಈ ಹಿಂದೆ ಧರ್ಮ ಒಡೆಯಲು ಮುಂದಾದಾಗ ಜನರೇ ತೀರ್ಪು ನೀಡಿದ್ದಾರೆ. ದೇವರುಗಳ ಹೆಸರಿನಲ್ಲಿ ಭಕ್ತರ ಮಧ್ಯೆ ಬಿರುಕು ಮೂಡಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಇದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಬಿ. ಆರ್. ಪಾಟೀಲರು ತಕ್ಕ ಶಾಸ್ತಿç ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮಾಜದಲ್ಲಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿಯೇ ನಾವು ಸಮಾಜದ ಎಲ್ಲ ಜನರಿಂದ ದೇಣಿಗೆ ಪಡೆಯುತ್ತಿದ್ದೇವೆ. ರಾಮ ಮಂದಿರದ ನಿರ್ಮಾಣದ ಆಶಯದಲ್ಲಿ ಇದು ಒಂದು. ಶರಣಮೇಳದಂತಹ ಪವಿತ್ರ ಕಾರ್ಯಕ್ರಮದಲ್ಲಿ ರಾಜಕೀಯ ಭಜನೆ, ಮಧ್ಯದ ವಿಷಯ ಮಾತನಾಡಿರುವುದು ನಿಮಗೆ ಶೋಭೆ ತರುತ್ತದೆಯೇ. ಮಾಜಿ ಶಾಸಕ ಬಿ ಆರ್ ಪಾಟೀಲರ ಕನಸಿನಲ್ಲಿಯೂ ಶಾಸಕ ಸುಭಾಷ್ ಗುತ್ತೇದಾರ ಬರುತ್ತಿದ್ದಾರೆ ಅದಕ್ಕಾಗಿಯೇ ಹೋದಲ್ಲಿ ಬಂದಲ್ಲಿ ಅದೇ ವಿಷಯ ಜಪ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ಹರ್ಷಾನಂದ ಗುತ್ತೇದಾರ, ಹಿರಿಯ ಮುಖಂಡ ಹಣಮಂತರಾವ ಮಲಾಜಿ, ಹಿಂದೂಪರ ಸಂಘಟನೆ ಮುಖಂಡ ರಾಜು ಭವಾನಿ, ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಅಧ್ಯಕ್ಷ ಗುರುಶಾಂತ ಟೆಂಗಳಿ, ಚಂದ್ರಕಾAತ ಬೋಡಕೆ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here