ನಿಯಂತ್ರಣ ತಪ್ಪಿದ ಕಾರು ಪತಿ ಮರಣ, ಪತ್ನಿಗೆ ಗಾಯ

0
1425

ಕಲಬುರಗಿ:ಜ.21: ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದು, ಮೃತ ವ್ಯಕ್ತಿಯ ಪತ್ನಿ ಗಾಯಗೊಂಡ ಘಟನೆ ಅಫಜಲಪುರ ತಾಲ್ಲೂಕಿನ ಕರ್ಜಗಿ ಹತ್ತಿರದ ಮಣ್ಣೂರ್ ರಸ್ತೆಯಲ್ಲಿನ ವಿವೇಕಾನಂದ್ ಶಾಲೆ ಹಾಗೂ ಹಾಲಹಳ್ಳಿ ಪೆಟ್ರೋಲ್ ಪಂಪ್ ಬಳಿ ಹೆದ್ದಾರಿಯಲ್ಲಿ ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಸಂಭವಿಸಿದೆ.
ಮೃತನಿಗೆ ಮಾಶಾಳ್ ತಾಂಡಾದ ನಿವಾಸಿ ವಿಶ್ವನಾಥ್ ರಾಠೋಡ್ (36) ಹಾಗೂ ಗಾಯಾಳುವನ್ನು ಮೃತನ ಪತ್ನಿ ಅಂಜಲಿ ಎಂದು ಗುರುತಿಸಲಾಗಿದೆ.
ಪತ್ನಿ ಅಂಜಲಿಯೊAದಿಗೆ ವಿಶ್ವನಾಥ್ ಅವರು ಇಂಡಿಗೆ ಹೋಗಿ ಮರಳಿ ತಮ್ಮ ಸ್ವಗ್ರಾಮಕ್ಕೆ ಬರುವಾಗ ನಿಯಂತ್ರಣ ತಪ್ಪಿ ಉರುಳಿಬಿದ್ದು, ಸ್ಥಳದಲ್ಲಿಯೇ ಅಸುನೀಗಿದರು. ಪತ್ನಿ ಅಂಜಲಿ ಕೈ ಮುರಿದಿದ್ದು, ಅವರಿಗೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here