ಫೆ. 2ರಂದು ಮದ್ದೂರಿನಲ್ಲಿ KUWJ ಸದಸ್ಯರ ಮಹಾಸಭೆ

0
683

ಕಲಬುರಗಿ, ಜ. 20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019-20ನೇ ಸಾಲಿನ 87ನೇ ವಾರ್ಷಿಕ ಮಹಾಸಭೆ ಬರುವ ಫೆಬ್ರುವರಿ 2ರಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಮದ್ದೂರಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪ (ಮದ್ದೂರು ಟೀಪಾನಿಸ್ ಹಿಂಭಾಗ, ಶಿವಪುರ) ದಲ್ಲಿ ನಡೆಯಲಿದೆ.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಇಚ್ಛಿಸುವ ಸದಸ್ಯರುಗಳು ವಿಷಯ ಸೂಚಿಯನ್ನು ಲಿಖಿತವಾಗಿ ಜನೆವರಿ 27ರೊಳಗೆ ರಾಜ್ಯ ಘಟಕಕ್ಕೆ ಕಳುಹಿಸಿಕೊಡಬೇಕು. ಸಭೆಯಲ್ಲಿ ಭಾಗವಹಿಸಲು ಸದಸ್ಯರಿಗೆ 2020-21ನೇ ಸಾಲಿನ ಸಂಘದ ಗುರುತಿನ ಚೀಟಿ ಕಡ್ಡಾಯವಿರುತ್ತದೆ.
ಸಭೆಯ ಬಗ್ಗೆ ಹೆಚ್ಚಿನ ಮಾಹಿತಿ, ವಸತಿ ವ್ಯವಸ್ಥೆಗಾಗಿ ಪಿ. ಹರೀಷ (9965363732), ಎಂ. ಪಿ. ವೆಂಕಟೇಶ (7899577726), ಪ್ರಭು ವಿ. ಎಸ್. (9611552323), ಸುಂದರರಾಜ್, ಶಿವಪುರ (9844493798), ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಕಲಬುರಗಿ ಜಿಲ್ಲೆಯ ಸಂಘದ ಆಸಕ್ತ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲು ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ ಅವರ ಸಲಹೆ ಮೇರೆಗೆ ಸಂಘದ ಪ್ರಧಾನ ಕಾರ್ಯದರ್ಶಿ ದೇವೀಂದ್ರಪ್ಪ ಅವಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Total Page Visits: 730 - Today Page Visits: 1

LEAVE A REPLY

Please enter your comment!
Please enter your name here