ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2021-22ನೇ ಸಾಲಿನ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನ

0
903

ಕಲಬುರಗಿ, ಜ. 20: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2021-22ನೇ ಸಾಲಿಗಾಗಿ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನಿ ಸಲಾಗಿದೆ.
2021-22ನೇ ಸಾಲಿನ ಪತ್ರಕರ್ತರ ಸಂಘದ ಸದಸ್ಯತ್ವದ ಪಡೆಯಲು ಜಗತ್ ವೃತ್ತದ ಜಿಲ್ಲಾ ಪಂಚಾಯತ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಅರ್ಜಿ ಪಡೆದು ದಿನಾಂಕ 21.01.2021 ರಿಂದ 31.01.2021ರವರೆಗೆ ಸಮಯ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ. ಅರ್ಜಿಯನ್ನು ಪಡೆದು ಭರ್ತಿ ಮಾಡಿ ಈ ಕೆಳಗಿನ ದಾಖಲೆಗಳ ಝರಾಕ್ಸ್ ಪತ್ರಿಯನ್ನು ಲಗತ್ತಿಸಿ, 1) ಹಳೆಯ ಗುರುತಿನ ಚೀಟಿ. 2) ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ. 3) ಇತ್ತಿಚೀನ ಪಾಸ್‌ಪೋರ್ಟ ಅಳತೆಯ ಮೂರು ಭಾವಚಿತ್ರಗಳು. 4) ರೂ. 300 ಸದಸ್ಯತ್ವ ಶುಲ್ಕ ಹಾಗೂ ರೂ. 10/- ಅರ್ಜಿ ಶುಲ್ಕ ಕೊಟ್ಟು ಸಂಘದ ಖಜಾಂಚಿ ರಾಜು ದೇಶಮುಖ ಅವರಿಂದ ತಪ್ಪದೇ ರಸೀದಿಯನ್ನು ಪಡೆಯಬೇಕೆಂದು ಸಂಘದ ಅಧ್ಯಕ್ಷರಾದ ಭವಾನಿಸಿಂಗ್ ಎಂ. ಠಾಕೂರ ಹಾಗೂ ಪ್ರಧಾನ ಕಾರ್ಯದರ್ಶಿ ದೇವೀಂದ್ರಪ್ಪ ಅವಂಟಿ ಅವರು ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here