ಬೆಂಗಳೂರು, ಜ 13: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುಧೀಘ್ರ ೧೭ ತಿಂಗಳ ನಂತರ ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ನೂತನವಾಗಿ ಸಂಪುಟಕ್ಕೆ ಎಂ.ಟಿ.ಬಿ. ನಾಗರಾಜ, ಮುರುಗೇಶ ನಿರಾಣಿ, ಉಮೇಶ ಕತ್ತಿ, ಸಿಪಿ ಯೋಗೇಶ್ವರ, ಎಸ್ಪಿ ಅಂಗಾರ, ಅರವಿಂದ ಲಿಂಬಾವಳಿ ಮತ್ತು ಆರ್. ಶಂಕರ ಅವರುಗಳು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದು (ಬುಧುವಾರ) ಸಂಜೆ ೪.೩೦ ಕ್ಕೆ ರಾಜ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ಪಟೇಲ್ ಅವರು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಈ ಹಿಂದೆ ಕೂಡಾ ಮುರುಗೇಶ ನಿರಾಣಿ ಅವರು ಬಿಎಸ್ವೆöÊ ಮುಖ್ಯಮಂತ್ರಿಯಾಗಿದ್ದಾಗ ಬೃಹತ್ ಕೈಗಾರಿಕಾ ಖಾತೆಯ ಸಚಿವರಾಗಿ ಸುಮಾರು ೧೧ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆದಂತಿದ್ದರು.
ನೂತವಾಗಿ ಸಂಪುಟಕ್ಕೆ ಉಮೇಶ ಕತ್ತಿ ಹುಕ್ಕೇರಿಯಿಂದ, ಎಸ್. ಅಂಗಾರ (ಸುಳ್ಳ), ಮುರುಗೇಶ ನಿರಾಣಿ (ಬಿಳಗಿ), ಅರವಿಂದ ಲಿಂಬಾವಳಿ (ಮಹಾದೇವಪುರ) ಅಲ್ಲದೇ ಮೂರು ಜನ ವಿಧಾನ ಪರಿಷತ್ ಸದಸ್ಯರುಗಳಾದ ಆರ್. ಶಂಕರ, ಎಂಟಿಬಿ ನಾಗರಾಜ ಮತ್ತು ಸಿ.ಪಿ. ಯೋಗೇಶ್ವರ ಅವರುಗಳು ಸೇರಿದ್ದಾರೆ.
ಇಂದಿನ ಪ್ರಮಾಣವಚನದ ಸ್ವೀಕರಿಸಿದವರಲ್ಲಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ, ಸುಳ್ಯ ಶಾಸಕ ಎಸ್ ಅಂಗಾರ, ಮುರುಗೇವಿಶ್ ನಿರಾಣಿ, ಎಂ ಟಿ ಬಿ ನಾಗರಾಜ್, ಆರ್ ಶಂಕರ್, ಸಿಪಿ ಯೋಗೇಶ್ವರ್ ಭಾಗಿಯಾಗಿದ್ದರು.
ಈ ಸಚಿವ ಸಂಪುಟ ವಿಸ್ತರಣೆಯ ಮೂಲಕ ಮುಖ್ಯಮಂತ್ರಿ ಬಿಎಸ್ ವೈ ಅವರ ಸಂಪುಟದಲ್ಲಿ ಒಟ್ಟು ಸದಸ್ಯರ ಸಂಖ್ಯೆ ೩೩ ಕ್ಕೆ ಏರಿದೆ.