ಹಬ್ಬ…ಹಬ್ಬ.. ಅಬ್ಬಬ್ಬಾ… ಮಾರುಕಟ್ಟೆಯಲ್ಲಿ ತರಕಾರಿ ಫುಲ್ ಖರೀದಿ

0
1018

(ರಾಜು ದೇಶಮುಖ)
ಕಲಬುರಗಿ, ಜ. 12: ಹಬ್ಬ… ಹಬ್ಬ.. ಅಬ್ಬಬ್ಬಾ ಏನು ಮಾರುಕಟ್ಟೆ… ಎಲ್ಲಿ ನೋಡಿದರೂ ಎಲ್ಲೆಡೆ ಜನರು ತರಕಾರಿ ಖರೀದಿಯಲ್ಲಿ ತೋಡಗಿ, ನಗರದ ಸುಪರ್ ಮಾರ್ಕೇಟನ್ ತರಕಾರಿ ಬಜಾರ್ ಫುಲ್ಲಾಗಿತ್ತು.
ಈ ಬಾರಿ ಎಳ್ಳಮಾವಸೆ ಮತ್ತು ಸಂಕ್ರಾAತಿ ಈ ಎರಡು ಹಬ್ಬಗಳು ಜೋಡಗಾಗಿ ಬಂದ್ದಿದ್ದು, ಈ ಹಬ್ಬಗಳು ಒಟ್ಟಿಗೆ ಬರುವುದು 40 ವರ್ಷಕ್ಕೊಮ್ಮೆ. ಇದರಿಂದಾಗಿ ಎಲ್ಲರೂ ಬಜ್ಜಿ ಕಡಬು ಮಾಡಲು ಬಜ್ಜಿ, ಮೆಂತೆ, ಪಾಲಕ್, ಪುಂಡೆ ಪಲ್ಲೆ ಸೇರಿದಂತೆ ಹಲವು ಬಗೆ ಬಗೆಯ ಕಾಯಿಪಲ್ಲೆ, ಗಡ್ಡೆ ಗೆಣಸು, ಬಾರಿ ಹಣ್ಣು ಸೇರಿದಂತೆ ಹಲವಾರು ಖಾದ್ಯಗಳನ್ನು ತಯಾರಿಸಲು ಖರೀದಿಗೆ ಮುಗಿಬಿದ್ದ ದೃಶ್ಯ ಎಲ್ಲಡೆ ಸಾಮಾನ್ಯವಾಗಿತ್ತು.
ಎರಡು ಹಬ್ಬಗಳು ಒಂದೇ ಬಾರಿಗೆ ಬಂದಿದ್ದರಿAದ ವರ್ತಕರಿಗೆ ಸ್ವಲ್ಪ ಬೇಜಾರಾಗಿದ್ದು, ಎರಡು ಬೇರೆ ಬೇರೆ ಬಂದಿದ್ದರೆ ಒಂದಿಷ್ಟು ವ್ಯಾಪಾರ ಹೆಚ್ಚಿಗೆ ಆಗುಬಹುದಿತ್ತು.
ಈ ಹಬ್ಬಗಳು ಬಿಟ್ಟರೆ ಮತ್ತೆ ಮುಂದೆ ಬೇಸಿಗೆ ಕಾಲದ ವರೆಗೆ ಹಣ್ಣು, ಹಂಪಲು ಮಾರಾಟ ಮಾಡುವ ವರ್ತಕರು ಕಾಯಬೇಕು, ಮಧ್ಯದಲ್ಲಿ ಯಾವುದೇ ಹಬ್ಬಗಳಿಲ್ಲ.

ಗಗನ್ನೇಕ್ಕೇರಿದ ತರಕಾರಿಗಳ ಬೆಲೆ:

ಜೋಡು ಹಬ್ಬಗಳ ಹಿನ್ನೆಲೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಯಾವುದು ತೆಗೆದುಕೊಂಡರೂ 20 ರೂ. 30 ರೂ.
ಆದರೂ ಜನರು ಈ ಬೆಲೆ ಹೆಚ್ಚಳಕ್ಕೆ ಕ್ಯಾರೇ ಅನ್ನದೇ ತರಕಾರಿ ಖರೀದಯಲ್ಲಿ ನಿರತರಾಗಿದ್ದರು.
ದುಡ್ಡು ಎಷ್ಟು ಹೋದರೇನು… ಈ ಹಬ್ಬಕ್ಕಾಗಿ ಖರೀದಿ ಮಾಡುವುದು ಬೀಡುವುದೇ ಎಂಬುದು ಎಲ್ಲರ ಲೆಕ್ಕಾಚಾರದಂತಿತ್ತು ಈ ಖರೀದಿಯ ಭರಾಟೆ.
ನಮ್ಮೆಲ್ಲ ಓದುಗರಿಗೂ, ಜಾಹೀರಾತುದಾರರಿಗೂ, ಹಿತೈಷಿಗಳಿಗೂ, ಬಂಧು, ಬಳಗದವರಿಗೂ, ಸ್ನೇಹಿತರಿಗೂ ಮೊದಲು ಎಳ್ಳಾಮವಾಸೆ ಶುಭಾಷಯಗಳು, ನಂತರ ಸಂಕ್ರಾAತಿಯ ಶುಭಾಷಯಗಳು….!

LEAVE A REPLY

Please enter your comment!
Please enter your name here