ಬಸಕಲ್ಯಾಣ ಕಾಂಗೈ ಟಿಕೆಟ್ ದಿ. ಬಿ. ನಾರಾಯಣ ಕುಟಂಬಕ್ಕೆ ನೀಡಲು ಕೋಲಿ ಸಮಾಜ ಒತ್ತಾಯ

0
995

ಕಲಬುರಗಿ, ಜ. 10: ಕಳೆದ 2020 ರ ಅಂತ್ಯದಲ್ಲಿ ಬಸವಕಲ್ಯಾಣದ ಜನಪ್ರಿಯ ಶಾಸಕರಾಗಿದ್ದ ಕೋಲಿ ಕಬ್ಬಲಿಗ ಸಮಾಜದ ಹಿರಿಯ ಮುಖಂಡರಾಗಿದ್ದ ಈ ಭಾಗದ ಅಹಿಂದ ನಾಯಕರಾಗಿದ್ದ ದಿ: ಬಿ.ನಾರಾಯಣರವರು ಮಹಾಮಾರಿ ಕೊವಿಡ್ – 19 ಕೈ ತುತ್ತಾಗಿ ತೀರಿಹೋದ ಮೇಲೆ ಜಿಲ್ಲೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಟಿಕೇಟ್ ಘೋಷಣೆಯಲ್ಲಿ ಆದ ವಿನಹಕಾರಣದ ವಿಳಂಬಕ್ಕೆ ಸಮಸ್ತ ಜಿಲ್ಲಾ ಕೋಲಿ ಕಬ್ಬಲಗ ಸಮಾಜ ಬೇಸರ ವ್ಯಕ್ತಪಡಿಸುತ್ತದೆ ಎಂದು ಕಾಂಗ್ರೆಸ್ ಶಿವಶರಣಪ್ಪ ಕೋಬಾಳ ಹೇಳಿದ್ದಾರೆ.
ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷಗಳು ಪಾಲಿಸುತ್ತ ಬಂದಿರುವ ನಿಯಮವೇ ನಮ್ಮ ದಿವಂಗತ ಬಿ. ನಾರಾಯಣರವರ ಕುಟುಂಬಕ್ಕೆ ಅನ್ವಯ ವಾಗಬೇಕಾಗಿದ್ದು ಕಾಣದ ಕೈಗಳ ಕೈಚಳಕ ಹಾಗೂ ರಾಜಕೀಯ ಮೇಲಾಟದಿಂAದ ದಿವಂಗತರ ಕುಟುಂಬಕ್ಕೆ ವಿಕೇಟ್ ತಪ್ಪಿಸುವ ಹುನ್ನಾರ ಜಿಲ್ಲಾ ರಾಜಕಾರಣದಿಂದ ರಾಜ್ಯದಲ್ಲಿ ನಡೆಯುತ್ತಿರುವುದು ಖಂಡನೀಯ ಎಂದರು.
ಕಾAಗ್ರೇಸ್ ಪಕ್ಷ ತನ್ನದೇ ಆದ ಅತ್ಯಂತ ಹಿರಿದಾದ ರಾಜಕೀಯ ಇತಿಹಾಸವನ್ನು ಹೊಂದಿರುವ ಪಕ್ಷವಾಗಿದ್ದು ಸರ್ವಜನಾಂಗದ ಜಾತ್ಯಾತೀತ ಮನೋಭಾವನೆಯುಳ್ಳ ಸಾಮಾಜಿಕ ನ್ಯಾಯಾದ ಅಡಿಯಲ್ಲಿ ಬೆಳೆದು ಬಂದಿರುವ ಪಕ್ಷವಾಗಿದ್ದು ಎಲ್ಲರನ್ನು ಸಮಾನಾವಾದ ದೃಷ್ಠಿಯಿಂದ ತೆಗೆದುಕೊಂಡು ಹೋಗುವ ಪಕ್ಷವಾಗಿದ್ದು ಈ ರಾಜ್ಯದಲ್ಲಿ ಇರುವ ಬಹುವಸಂಖ್ಯಾತ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ದಲಿತ ವರ್ಗಗಳ ಪಕ್ಷವಾಗಿರುತ್ತದೆ. ಆದರೆ ಇತ್ತಿಚಿನ ದಿನಗಳಲ್ಲಿ ವಿಶೇಷವಾಗಿ ಅಹಿಂದ ವರ್ಗದ ಮುಖಂಡರುಗಳಿಗೆ ಪಕ್ಷದಲ್ಲಿ ಗುರುತಿಸುವ ಕೆಲಸ ಆಗದೇ ಇರುವುದು ನಮ್ಮೆಲ್ಲರಿಗೆ ಅತೀವ ನೋವನ್ನು ತರಿಸಿದೆ.
ಬರುವ ಬಸವ ಕಲ್ಯಾಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಿ. ಬಿ ನಾರಾಯಣ ಅವರ ಕುಟುಂಬಕ್ಕೆ ಟಿಕೆಟ್ ಕೊಡಬೇಕೆಂದು ಅವರು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕಾಂಗೈ ಹಿರಿಯ ಮುಖಂಡ ಮಲ್ಲಿಕಾರ್ಜುನ ಸಾವು ಅಲೂರ, ಅಖಿಲ ಭಾರತ ಕೋಲಿ ಸಮಾಜದ ಜಿಲ್ಲಾ ಅಧ್ಯಕ್ಷ ವಸಂತ ನರಿಬೋಳ, ಹೈ.ಕ. ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷರಾದ ಬಸವರಾಜ ಬೂದಿಹಾಳ ಅವರುಗಳು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here