‘ ಅಂಜು’ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

0
970

ಟೆನ್ ಟ್ರೀಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಅಂಜು ಚಲನಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಶ್ರೀ ಪ್ರಸನ್ನ ಆಂಜನೇಯ ದೇವಾಲಯದಲ್ಲಿ ಖೇಲ್ ಚಲನಚಿತ್ರದ ನಿರ್ಮಾಪಕರಾದ ಮಾರ್ಕೆಟ್ ಸತೀಶ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಲೆಕ್ಕಾಚಾರ ಚಲನಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮರಾ ಸ್ವಿಚ್ ಆನ್ ಮಾಡಿದ್ದರು. ಸತತ ಐದು ದಿನಗಳ ಕಾಲ ಎಡಬಿಡದೆ ಚಿಕ್ಕಬಳ್ಳಾಪುರ, ಚಿಂತಾಮಣಿ, ನಂದಿಗಿರಿಧಾಮ, ಮೊದಲಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿದ ತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸುವ ಹಾಗೂ ಖಳನಟರಿಂದ ತಪ್ಪಿಸಿಕೊಳ್ಳುವ ಸಾಹಸ ದೃಶ್ಯಗಳ ಜೊತೆಗೆ ಹಲವಾರು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಳಿಸಿದೆ.
ಬೆಂಗಳೂರಿನಿAದ ಹೈದರಾಬಾದ್ ಚಲನಚಿತ್ರವೊಂದರ ಆಡಿಷನ್ ಗಾಗಿ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗಮಧ್ಯದಲ್ಲಿ ಐದು ಮಂದಿ ಸೈಕೋಗಳು ಪ್ರವೇಶವಾಗಿ ಅವರಿಂದ ಎದುರಾಗುವ ಸಮಸ್ಯೆಗಳು ಏನು ಹಾಗೂ ಆ ಸಮಸ್ಯೆಗಳಿಂದ ಆರು ಜನರೂ ಹೇಗೆ ಪಾರಾಗುತ್ತಾರೆ ಎಂಬ ಕುತೂಹಲ ಭರಿತ ಕಥಾ ಹಂದರ ಚಿತ್ರದಲ್ಲಿದೆ. ಹಿರಿಯ ಚಲನಚಿತ್ರ ನಟರಾದ ಅಭಿಜಿತ್ ಹಾಗೂ ಜೂನಿಯರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ನಾಯಕಿಯಾಗಿ ಕನ್ನಡ ಬಿಗ್ ಬಾಸ್ ಆಟಗಾರ್ತಿ, ರ‍್ರಾಬರ‍್ರಿ, ಗೂಸೀಗ್ಯಾಂಗ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಸೋನು ಪಾಟೀಲ, ಎರಡನೆ ನಾಯಕಿನಟಿ ಯಶಸ್ವಿನಿ ಈಗಾಗಲೆ ಲೆಕ್ಕಾಚಾರ, ಮತ್ತು ರಾಜಾರಾಣಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಬ್ಬ ನಾಯಕಿ ರಮ್ಯ ಎಸ್ಕೇಪ್, ನಂದಿತ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕರಾಗಿ ರಾಜ್‌ಪ್ರತೀಕ, ಉಲಿಬೆಲೆ ರಾಜೇಶ್ ರೆಡ್ಡಿ, ಸಿದ್ದಾರ್ಥ, ಖಳನಟರಾಗಿ ಬಾಂಬೆಯ ರಾಜೇಶ್ ಮಂಡ್ಕೂರ್, ಆನಂದ ರಂಗರೇಜ್ ನಟಿಸುತ್ತಿದ್ದು ತಾರಾಗಣದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ, ಜೀವನ್, ಶಿವು, ಅಬ್ದುಲ್ ರೆಹಮಾನ್ ಮೊದಲಾದವರಿದ್ದಾರೆ.
ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಎರಡನೆ ಹಂತದ ಚಿತ್ರೀಕರಣ ಉತ್ತರ ಕರ್ನಾಟಕದ ಕೆಲವು ಪ್ರಮುಖ ಕಡೆ ನಡೆಯಲಿದೆಯಲ್ಲದೆ, ಗದಗ ಜಿಲ್ಲೆಯ ಗಜೇಂದ್ರಗಡ , ಕಾಲಕಾಲೇಶ್ವರ ಸುತ್ತಮುತ್ತ, ಬಾಗಲಕೋಟ ಜಿಲ್ಲೆಯ ಬಾದಾಮಿ , ಐಹೊಳೆ, ಕೆಲೂರ, ಸಿದ್ದನಕೊಳ್ಳ , ಮಹಾಕೂಟ, ಶಿವಯೋಗಮಂದಿರ ಸುತ್ತಮುತ್ತಲಿನಲ್ಲಿ ನಡೆಯಲಿದೆ ಎಂದು ನಿರ್ದೇಶಕ ರಾಜೀವಕೃಷ್ಣ ತಿಳಿಸಿದ್ದಾರೆ.
ರಮೇಶ್ ಕೊಯಿರಾ ಛಾಯಾಗ್ರಹಣ, ಸುರೇಶ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ಮಲ್ಲಿ ಸಂಕಲನ, ಶಿವು ಸಾಹಸ, ನಾಗಸುಮಂತ ಸ್ಥಿರ ಚಿತ್ರಣ , ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಪ್ರಚಾರಕಲೆ , ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದ್ದು, ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಯುವ ಉತ್ಸಾಹಿ ನಿರ್ದೇಶಕ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಟೆನ್ ಟ್ರೀಸ್ ಪ್ರೊಡಕ್ಷನ್ ಹೌಸ್‌ದಿಂದ ಚಿತ್ರ ನಿರ್ಮಾಣವಾಗುತ್ತಿದೆ.

LEAVE A REPLY

Please enter your comment!
Please enter your name here