ಗುಡ್ ನ್ಯೂಜ್ ಕೇಂದ್ರದಿoದ ನಾಳೆ ರಾಜ್ಯಕ್ಕೆ ಕೊರೊನಾ ಲಸಿಕೆ ಲಭ್ಯ

0
1168

ಬೆಂಗಳೂರು, ಜ. 8: ಕೊರೊನಾದಿಂದ ಕಳೆದ 10 ತಿಂಗಳಿoದ ಕೆಂಗೆಟ್ಟ ರಾಜ್ಯಕ್ಕೆ ನಾಳೆ (ಶನಿವಾರ) ಕೊರೊನಾ ವ್ಯಾಕ್ಸಿನ ಬರಲಿದೆ.
13 ಲಕ್ಷ 90 ಸಾವರಿದಷ್ಟು ಡೋಜ್‌ನಷ್ಟು ಬರಲಿದ್ದು, ಮೊದಲಿಗೆ 25 ಸಿಬ್ಬಂದಿಗೆ ಈ ಲಸಿಕೆಯ ಅನುಕು ಪರೀಕ್ಷೆ ಮಾಡಲಾಗುವುದು.
ಈ ವಿಷಯವನ್ನು ಇಂದು ಆರೋಗ್ಯ ಸಚಿವ ಡಾ. ಸುಧಾಕರ ಅವರ ಹೇಳಿದ್ದು, ಕೇಂದ್ರದಿoದ ರಾಜ್ಯಕ್ಕೆ ಬರಲಿರುವ ಈ ಕೊರನಾ ಲಸಿಕೆ ಎಲ್ಲ ಜಿಲ್ಲೆಗಳಿಗೆ ಸಿಗಲಿದ್ದು, ಕೊರೊನಾ ಲಸಿಕೆಯನ್ನು ಸೋಮವಾರದಿಂದ ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ನೀಡಲು ಪ್ರಾರಂಭಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಈ ಲಸಿಕೆಯನ್ನು ಕೊರೊನಾ ಫ್ರಂಟ್‌ಲೈನ್ ವಾರಿಯಸ್ಸ್ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಗುವುದು. ನಂತರ ಹಂತ ಹಂತವಾಗಿ ಸಾರ್ವಜನಿಕರಿಗೆ ನೀಡಿಲಾಗುವುದು ಎಂದರು.
ಸಾರ್ವಜನಿಕರಿಗೆ ಲಸಿಕೆ ನೀಡಲು ಕೋವ್ಯಾಪ್‌ನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಆ್ಯಪ್‌ನಲ್ಲಿ 50 ವರ್ಷ ಮೇಲ್ಪಟ್ಟವರು ಹೆಸರು ನೋಂದಾವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದ್ದು, ಈ ಆಪ್‌ನಲ್ಲಿ ನೊಂದಾವಣಿ ಮಾಡಿಕೊಂಡವರಿಗೆ ಎಲ್ಲಿ, ಯಾವಾಗ ಲಸಿಕೆ ನೀಡುವುದರ ಮಾಹಿತಿ ಜೊತೆಗೆ ದಿನಾಂಕ ಮತ್ತು ಆಸ್ಪತ್ರೆಯನ್ನು ನಮೂದಿಸಲಾಗುವುದು.

LEAVE A REPLY

Please enter your comment!
Please enter your name here