ಗ್ರಾ.ಪಂ ಚುನಾವಣೆ: ಚಿತ್ತಾಪುರ ತಾಲೂಕಿನ ಎಲ್ಲಾ 410 ಸ್ಥಾನಗಳ ಫಲಿತಾಂಶ ಪ್ರಕಟ

0
919

ಕಲಬುರಗಿ.ಡಿ.30: ಸರ‍್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆಯ ಎರಡನೇ ಹಂತದಲ್ಲಿ ಕಳೆದ ಡಿ.27 ರಂದು ಚಿತ್ತಾಪುರ ತಾಲೂಕಿನ 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ 410 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ತಾಲೂಕಿನ ಒಟ್ಟು 24 ಗ್ರಾಮ ಪಂಚಾಯತಿಗಳಾದ ಗುಂಡಗರ‍್ತಿ, ಇವಣಿ, ಮಾಡಬೂಳ, ದಂಡೋತಿ, ದಿಗ್ಗಾಂವ, ಮೊಗಲಾ, ಸಾತನೂರ, ಪೇಠಶಿರೂರ, ಮುಗಳನಾಗಾಂವ, ಭಾಗೋಡಿ, ಮಾಲಗತ್ತಿ, ರಾವೂರ, ಕಮರವಾಡಿ, ಕರದಾಳ, ಹಲಕಟ್ಟಾ, ಇಂಗಳಗಿ, ಲಾಡ್ಲಾಪುರ, ಅಳ್ಳೊಳ್ಳಿ, ಭೀಮನಳ್ಳಿ, ಆಲೂರ (ಬಿ), ಯಾಗಾಪುರ, ನಾಲವಾರ, ಕಡಬೂರ ಹಾಗೂ ಸನ್ನತಿಯ 133 ಕ್ಷೇತ್ರಗಳ ಒಟ್ಟು 410 ಸ್ಥಾನಗಳ ಪೈಕಿ ಈಗಾಗಲೆ 89 ಅಭ್ರ‍್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 321 ಅಭ್ರ‍್ಥಿಗಳ ಆಯ್ಕೆಗಾಗಿ ಡಿ.27 ರಂದು ಚುನಾವಣೆ ನಡೆದಿತ್ತು.
ಬುಧವಾರ (ಇಂದು) ನಡೆದ ಮತ ಎಣಿಕೆಯಲ್ಲಿ ಈ 321 ಅಭ್ರ‍್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಒಟ್ಟು 410 ಸ್ಥಾನಗಳ ರ‍್ತಿಗೆ 200 ಸ್ಥಾನ ಸಾಮಾನ್ಯ ಮತ್ತು 210 ಸ್ಥಾನ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು.
410 ಸದಸ್ಯ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ರ‍್ಗವಾರು ಅಭ್ರ‍್ಥಿಗಳನ್ನು ನೋಡಿದಾಗ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-56 ಮತ್ತು ಮಹಿಳಾ-68 ಸೇರಿದಂತೆ 124 ಅಭ್ರ‍್ಥಿಗಳಿದ್ದಾರೆ. ಅನುಸೂಚಿತ ಪಂಗಡ ಸದಸ್ಯ ಸ್ಥಾನಗಳ ಪೈಕಿ 24 ಮಹಿಳಾ ಅಭ್ರ‍್ಥಿಗಳಿದ್ದಾರೆ. ಹಿಂದುಳಿದ “ಅ” ರ‍್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-17 ಮತ್ತು ಮಹಿಳಾ-32 ಸೇರಿದಂತೆ 49 ಅಭ್ರ‍್ಥಿಗಳಿದ್ದಾರೆ. ಹಿಂದುಳಿದ “ಬ” ರ‍್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-8 ಮತ್ತು ಮಹಿಳಾ-4 ಸೇರಿದಂತೆ 12 ಅಭ್ರ‍್ಥಿಗಳು ಹಾಗೂ ಸಾಮಾನ್ಯ ರ‍್ಗ ಸದಸ್ಯ ಸ್ಥಾನಗಳ ಪೈಕಿ ಸಾಮಾನ್ಯ-119 ಮತ್ತು ಮಹಿಳಾ-82 ಸೇರಿದಂತೆ 201 ಅಭ್ರ‍್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಚಿತ್ತಾಪೂರ ಪಟ್ಟಣದ ಶ್ರೀ ರೇವಣಸಿದ್ದಪ್ಪ ಕಾಂತಾ ರ‍್ಕಾರಿ ಪ್ರಥಮ ರ‍್ಜೆ ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಫಲಿತಾಂಶ ತಿಳಿಯಲು ಕುತೂಹಲದಿಂದ ಸಾವಿರಾರು ಜನ ಅಭ್ರ‍್ಥಿಗಳ ಬೆಂಬಲಿಗರು ಮತ ಎಣಿಕೆ ಕೆಂದ್ರದ ಹೊರಗಡೆ ನೆರಿದಿದ್ದರು, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ರ‍್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here