ಕಲಬುರಗಿ, ಡಿ. 28: ಎರಡನೇ ಹಂತದಲ್ಲಿ ನಡೆದ ಜಿಲ್ಲೆಯ 5 ತಾಲೂಕುಗಳ ಮತ ಏಣಿಕೆಯು ಇದೇ 30ರಂದು ಆಯಾ ತಾಲೂಕಿನಲ್ಲಿ ನಡೆಯಲಿದ್ದು, ಮತ ಏಣಿಕೆಗಾಗಿ ಬಂದೋಬಸ್ತಗಾಗಿ 628 ಪೋಲಿಸರು ಸೇರಿದಂತೆ 161 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ರಕ್ಷಣಾಧಿಕಾರಿಗಳಾದ ಸೀಮಿ ಮರಿಯಮ್ ಜಾರ್ಜ್ ಅವರು ತಿಳಿಸಿದ್ದಾರೆ.
ಮತ ಏಣಿಕೆಯ ಬಂದೋಬಸ್ತಗಾಗಿ ತಮ್ಮ ನೇತೃತ್ವದಲ್ಲಿ ಒಬ್ಬರು ಎಡಿಷನಲ್ ಎಸ್ಪಿ, 8 ಜನ ಡಿಎಸ್ಪಿಗಳು, 16 ಸಿಪಿಐ, 39 ಪಿಎಸ್‌ಐ, 97 ಜನ ಎಎಸ್‌ಐ, 628 ಹೆಡ್ ಕಾನ್ಸಿಟೇಬಲ್, ಮತ್ತು ಕಾನ್ಸಿಟೇಬಲ್ ಸೇರಿದಂತೆ 73 ಹೋಂಗಾಡ್ಸ್, ಕೆಎಸ್‌ಆರ್‌ಪ 04 ಡಿಎಆರ್ 11 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.