ಜನೆವರಿ 1 ರಿಂದ ಜಿಲ್ಲೆಯಲ್ಲಿ 10ನೇ ಮತ್ತು 12ನೇ ತರಗತಿಗಳು ಪುನರಾರಂಭ: ಡಾ. ಪಿ. ರಾಜಾ

0
1241

ಕಲಬುರಗಿ, ಡಿ. 28: ರಾಜ್ಯದಲ್ಲಿನ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಬರುವ ಜನೆವರಿ 1 ರಿಂದ ಪುರನಾರಂಭಗೊಳ್ಳಲಿದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡುತ್ತ, ಸರಕಾರದ ಮಾರ್ಗಸೂಚಿಯನ್ವಯ ದ್ವಿತೀಯ ಪಿಯುಸಿ ತರಗತಿಗಳನ್ನು ಸಹ ಆರಂಭಿಸಲು ಸರಕಾರ ಸೂಚನೆ ನೀಡಿದೆ.
ವಿದ್ಯಾಗಮ ಕಾರ್ಯಕ್ರಮ ಯಶ್ವಿಯಾಗಿ ನಿರ್ವಹಿಲು ಅಗತ್ಯ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಆರಂಭಿಸಲಾಗುವುದು ಎಂದು ಅವರು ನುಡಿದರು.
ದಿನಾಂಕ 1.1.2021 ರಿಂದ 10ನೇ ಮತ್ತು 12ನೇ ತರಗತಿಗಳು ಪ್ರಾರಂಭವಾದ ಮೇಲೆ ಅದರ ಅನುಭವದ ಆಧಾರದ ಮೇಲೆ 15.01.2021 ರಿಂದ 11ನೇ ತರಗತಿಗಳನ್ನು ಆರಂಭಿಸುವುದು.
ವಿದ್ಯಾಗಮ ಕಾರ್ಯಕ್ರಮವನ್ನು ದಿನಾಂಕ 01.01.2021 ರಿಂದ 6 ರಿಂದ 9ನೇ ತರಗತಿಗಳನ್ನು ಮಾತ್ರ ಪ್ರಾರಂಭಿಸುವುದು ನಂತರ ಅನುಭವದ ಮೇಲೆ ದಇನಾಂಕ 14.01.2021 ರಿಂದ 1 ರಿಂದ 5ನೇ ತರಗತಿಗಳಿಗೆ ವಿದ್ಯಾಗಮ ಪ್ರಾರಂಭಿಸುವುದು.
10ನೇ ತರಗತಿಗಳನ್ನು ಬೆಳಿಗ್ಗೆ 10 ರಿಂದ 12.30ರ ವರೆಗೆ 3 ಅವಧಿಗಳನ್ನು ನಡೆಸಲಾಗುವುದು ಇದು ವಾರದ 6 ದಿನಗಳಲ್ಲಿ ತರಗತಿ ನಡೆಯುತ್ತವೆ.
8ನೇ ಮತ್ತು 9ನೇ ತರಗತಿ ಪ್ರೌಢಶಾಲೆಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ 2 ರಿಂದ 4.30ರ ವರೆಗೆ ವಾರದ 5 ದಿನಗಳು ನಡೆಯುವವು.
1ರಿಂದ 5ನೇ ತರಗತಿಯವರೆಗಿನ ಶಾಲೆಗಳಲ್ಲಿ 1 ರಿಂದ 3 ಸೋಮವಾರ, 4,5ನೇ ತರಗತಿ ಮಂಗಳವಾರ ಈ ರೀತಿ ದಿನ ಬಿಟ್ಟು ದಿನ ತರಗತಿ ನಡೆಸಲಾಗುವುದು.
1 ರಿಂದ 7, 8ನೇ ತರಗತಿ ಶಾಲೆಗಳಲ್ಲಿ ಸೋಮವಾರ 1 ರಿಂದ 5, ಮಂಗಳವಾರ 6-8 ತರಗತಿ ಹೀಗೆ ದಿನ ಬಿಟ್ಟು ದಿನ ತರಗತಿಗೆ ಮಕ್ಕಳು ಬರುವುದು.
ಪ್ರತಿ ತರಗತಿಯ ಅವಧಿ 45 ನಿಮಿಷ, 6 ರಿಂದ 9ನೇ ತರಗತಿ ಮಕ್ಕಳು ಸ್ಥಳದಲ್ಲಿನ ಶಾಲೆಗಳ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ನೀಡಿದೆ. ದಾಖಲಾತಿ ದೂರದ ಶಾಲೆಯಲ್ಲಿದ್ದರೂ ಅನುಮತಿಸಲಾಗಿದೆ.
ಶಿಕ್ಷಕರು ಶಾಲೆ ಪ್ರಾರಂಭಕ್ಕಿAತ ಮುಂಚೆ ವೈದ್ಯಕೀಯ ಪರೀಕ್ಷ ಮಾಡಿಸಿಕೊಳ್ಳುವುದು, ಶಾಲೆಗಳಲ್ಲಿ ಲಭ್ಯವಿರುವ ಭೌತಿಕ ಸೌಲಭ್ಯಗಳು ಮತ್ತು ಇತರೆ ಸೌಲಭ್ಯಗಳ ಅಲ್ಲದೇ ಕೋಠಡಿ ಶೌಚಾಲಯ, ಮೈದಾನ ಸ್ವಚ್ಛಗೊಳಿಸಿ ಕೋವಿಡ್ 19ರ ಮುನ್ನೆಚ್ಚರಿಕೆಗಳನ್ನು ತೆಗೆದುಒಂಡು ತರಗತಿಗಳ ವ್ಯವಸ್ಥ ಮಾಡಿಕೊಳ್ಳಬೇಕು
ಮಕ್ಕಳ ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ, ಅನುಮತಿ ಪತ್ರದಲ್ಲಿ ಮಗುವಿಗೆ ಯಾವುದೇ ಕೋವಿಡ್ ಸೋಂಕಿನ ಲಕ್ಷಣಗಳಿರುವುದಿಲ್ಲ ಎಂಬುದನ್ನು ದೃಢೀಕರಿಸಬೇಕಾಗುತ್ತದೆ.
ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈ ಅನುಸರಿಸುತ್ತಿರುವ ಆನ್ ಲೈನ್ ಇತರೆ ಪರ್ಯಾಯ ವಿಧಾನವನ್ನು ಮುಂದುವರೆಸಿಕೊAಡು ಹೋಗುವುದು.
ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು ಮುಂದುವರೆಯಲಿದೆ.
ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮುಂಚಿನ 72 ಗಂಟೆಗಳ ಅಂತರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹೀಗೇ ಇನ್ನು ಕೋವಿಡ್ ಸೋಂಕಿನಿAದ ದೂರವಿಡುವ ಹಲವಾರು ಸರಕಾರದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

LEAVE A REPLY

Please enter your comment!
Please enter your name here