30ರಂದು ಕಲಬುರಗಿ ಗ್ರಾ.ಪಂ. ಮತ ಏಣಿಕೆ ಅಭ್ಯರ್ಥಿ, ಏಜೆಂಟ್‌ರಿಗೆ ತಹಸೀಲ್ದಾರರಿಂದ ನಿರ್ದೇಶನ

0
1035

ಕಲಬುರಗಿ, ಡಿ. 28: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ. – 2020 ರ ನಿಮಿತ್ಯ ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತಗಳ 166 ಕ್ಷೇತ್ರಗಳಿಗೆ ದಿನಾಂಕ: 22.12.2020 ರಂದು ಮತದಾನ ಜರುಗಿದ್ದು, ದಿನಾಂಕ: 30,12,2020 ರಂದು ಬೆಳಗ್ಗೆ 8-00 ಗಂಟೆಯಿAದ ಸರ್ಕಾರಿ ಪಾಲೆಟೆಕ್ಸಿಕ್ ಕಾಲೇಜು. ಕಲಬುರಗಿಯಲ್ಲಿ ಮತ ಏಣಿಕೆ ಜರುಗಲಿದೆ ಎಂದು ಕಲಬುರಗಿ ತಹಸಿಲ್ದಾರಾದ ಸಂಗಯ್ಯ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ ಏಣಿಕೆ ಕುರಿತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಚುನಾವಣಾ ಏಜೆಂಟರುಗಳಿಗೆ ಕೆಲವು ನಿರ್ದೇಶನಗಳನ್ನು ನೀಡಲಾಗಿದೆ.
ಚುನಾವಣೆಗೆ ಸ್ಫರ್ದಿಸಿದ ಅಭ್ಯರ್ಥಿ ಅಥವಾ ಏಜೆಂಟ ರವರ ಪೈಕಿ ಒಬ್ಬರಿಗೆ ಮಾತ್ರ ಏಣಿಕೆ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶವಿರುತ್ತದೆ ಅಲ್ಲದೇ ಮತ ಏಣಿಕೆಗಾಗಿ ಪ್ರತಿ ಟೇಬಲಿಗೆ ಒಬ್ಬ ಮೇಲ್ವಚಾರಕರು ಹಾಗೂ ಒಬ್ಬರು. ಏಣಿಕೆ ಹಾಗೂ ಸಹಾಯಕರನ್ನು ಒಳಗೊಂಡತೆ ಒಟ್ಟು 60 ಟೇಬಲಗಳನ್ನು ಸಿದ್ಧಪಡಿಸಲಾಗಿದೆ.
ಮತ. ಏಣಿಕೆಗೆ ಆಗಮಿಸುವ ಅಭ್ಯರ್ಥಿ / ಏಜೆಂಟರವರು ತಮಗೆ ಸಂಬAಧಿಸಿದ. ಕ್ಷೇತ್ರದ ಏಣಿಕೆ ನಡೆಯುವ ಟೇಬಲಗಳಲ್ಲಿ ಏಣಿಕೆ ಸಮಯಕ್ಕೆ ಹಾಜರಿರುವುದು. ಹಾಗೂ ತಮಗೆ ಸಂಬAಧಿಸಿದ ಕ್ಷೇತ್ರದ ಮತ ಏಣಿಕೆ ಮುಕ್ತಾಯವಾದ ನಂತರ ಎಣಿಕೆ ಕೇಂದ್ರದಿAದ ತೆರಳಬೇಕು ಎಂದು ಅವರು ತಿಳಿಸಿದ್ದಾರೆ.
ಮತ ಏಣಿಕೆ ಕೇಂದ್ರದಲ್ಲಿ, ಗುಟುಕಾಬೀಡಿ, ಸಿಗರೇಟ್ ರಂತಹ ಮಾದಕ ವಸ್ತಗಳು ಅಥವಾ ಮೊಬೈಲ್ ರೆಕಾರ್ಡರಂತಹ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನು ನಿರ್ಭಂಧಿಸಲಾಗಿದೆ.
ಮತ ಏಣಿಕೆ ಕೇಂದ್ರದ ಬ್ಯಾರಿಗೇಟ್ ಒಳಗಡೆ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳ ವಾಹನಗಳನ್ನು ಹೊರತುಪಡಿಸಿ. ಬೇರೆ. ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ಹೊರಡಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here