2ನೇ ಹಂತದ ಚುನಾವಣೆ ಶೇ. 74.55ರಷ್ಟು ಮತದಾನ

0
1001

ಕಲಬುರಗಿ, ಡಿ. 27: ಜಿಲ್ಲೆಯ 5 ತಾಲೂಕುಗಳ 116 ಗ್ರಾಮ ಪಂಚಾಯತ್‌ಗಳಿಗೆ ಇಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಸರಾಸರಿ 74.55 ರಷ್ಟು ಮತದಾನವಾಗಿದೆ.
ಜೇವರ್ಗಿ ತಾಲೂಕಿನ 23 ಗ್ರಾಮ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 77.65ರಷ್ಟು ಮತದಾನವಾದರೆ ಅತೀ ಹೆಚ್ಚು ಮತದಾನ ಸೇಡಂ ತಾಲೂಕಿನ 27 ಗ್ರಾಮ ಪಂಚಾಯತ್‌ಗಳಿಗೆವಾಗಿದೆ.
ಉಳಿದoತೆ ಚಿಂಚೋಳಿ ತಾಲೂಕಿನ 27 ಗ್ರಾಮ ಪಂಚಾಯತ್‌ಗಳಿಗೆ ಶೇ. 76.65ರಷ್ಟು, ಯಡ್ರಾಮಿ ತಾಲೂಕಿನ 15 ಗ್ರಾಮ ಪಂಚಾಯತಗಳಿಗೆ ಶೇ. 69.85 ಮತ್ತು ಚಿತ್ತಾಪೂರ ತಾಲೂಕಿನ 24 ಗ್ರಾಮ ಪಂಚಾಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 66.20ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ಇಂದು ಒಟ್ಟು 116 ಗ್ರಾಮ ಪಂಚಾಯತಗಳಿಗೆ 216066 ಪುರುಷ ಮತದಾರರು ಮತ್ತು 208607 ಮಹಿಳಾ ಮತದಾರರು ಸೇರಿದಂತೆ ಒಟ್ಟು 424673 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ತಾಲೂಕವಾರು ವಿವರ: ಜೇವರ್ಗಿ ತಾಲೂಕಿನಲ್ಲಿ 85365 ಮತದಾರರಲ್ಲಿ 44011 ಪುರುಷ ಮತ್ತು 41433 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ.
ಚಿತ್ತಾಪೂರ ತಾಲೂಕಿನಲ್ಲಿ 71943 ಮತದಾರರರು ಮತ ಚಲಾಯಿಸಿದ್ದು, ಇದರಲ್ಲಿ 35747 ಪುರುಷ ಮತ್ತು 36196 ಮಹಿಳೆಯರು ಮತಚಲಾಯಿಸಿದ್ದು, ಇಲ್ಲಿ ಪುರುಷರಗಿಂತ ಮಹಿಳಾ ಮತದಾರರೇ ಹೆಚ್ಚು ಮತದಾನ ಮಾಡಿದ್ದಾರೆ.
ಸೇಡಂ ತಾಲೂಕಿನಲ್ಲಿ ಒಟ್ಟು 116371 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, 58103 ಮಹಿಳೆಯರು, 58268 ಪುರುಷರು ಮತದಾನದ ಹಕ್ಕು ಚಲಾಯಿಸಿದಂತಾಗಿದೆ.
ಚಿoಚೋಳಿ ತಾಲೂಕಿನಲ್ಲಿ 202446 ಮತದಾರರು ಮತದಾನ ಮಾಡಿದ್ದು, 52132 ಪುರುಷರು ಮತ್ತು 49314 ಮಹಿಳೆಯರು ಸೇರಿದ್ದಾರೆ.
ಯಡ್ರಾಮಿ ತಾಲೂಕಿನಲ್ಲಿ 49558 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 25908 ಪುರುಷರು ಮತ್ತು 23650 ಮಹಿಳೆಯರು ಮತದಾನ ಮಾಡಿದಂತಾಗಿದೆ.
ಒಟ್ಟು ಇಂದು ನಡೆದ ಚುನಾವಣೆಯಲ್ಲಿ ಐದು ತಾಲೂಕುಗಳ 116 ಗ್ರಾಮ ಪಂಚಾಯತ್‌ಗಳಿಗೆ 216066 ಪುರುಷರು ಮತ್ತು 208607 ಮಹಿಳೆಯರು ಮತದಾನ ಮಾಡಿದ್ದಾರೆ.
ಮೊದಲ ಹಂತದಲ್ಲಿ ಶೇ. 74.86 ಮತ್ತು ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ 74.55 ಮತದಾನವಾದಂತಾಗಿದೆ.

LEAVE A REPLY

Please enter your comment!
Please enter your name here