ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರದ್ದು ಮತ್ತೆ ಯುಟರ್ನ ಹೊಡೆದ ಸಿಎಂ

0
1237

ಬೆoಗಳೂರು, ಡಿ. 24: ರೂಪಾಂತರಗೊAಡ ಕರೊನಾ ನಿಯಂತ್ರಣಕ್ಕಾಗಿ ಇಂದಿನಿAದ ಜನವರಿ 2ರವರೆಗೆ 8 ದಿನಗಳ ಕಾಲ ಹೇರಿದ್ದ ಕರ್ಫ್ಯೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸರಕಾರ ಇಂದು ಆದೇಶ ಹಿಂಪಡೆದಿದೆ.
ಕಳೆದ ಎರಡು ದಿನಗಳಿಂದ ನೈಟ್ ಕರ್ಫ್ಯೂ ಬಗ್ಗೆ ಯುಟರ್ನ ತೆಗೆದುಕೊಳ್ಳುತ್ತಿದ್ದ ಯಡಿಯೂರಪ್ಪ ಮತ್ತೋಮ್ಮೆ ಯುಟರ್ನ್ ಆಗಿದ್ದಾರೆ.
ರಾತ್ರಿ 11 ರಿಂದ ಬೆಳಗಿನ ಜಾವ 5ರ ವರೆಗೆ ಕರ್ಫ್ಯೂ ವಿಧಿಸಿದ್ದು, ಯಾವ ಉದ್ದೇಶಕ್ಕಾಗಿ ಎಂಬುದು ಸಾರ್ವಜನಿಕರ ಆಕ್ರೋಶ ಹಾಗೂ ತಪ್ಪು ನಿರ್ಧಾರವನ್ನು ಎಲ್ಲರೂ ವಿರೋಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ವೈ. ಕರ್ಫ್ಯೂ ರದ್ದು ಪಡಿಸಿ, ಆದೇಶ ಹಿಂದಕ್ಕೆ ಪಡೆದಿದ್ದಾರೆ.
ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದ ಸಿಎಂ ಅವಶ್ಯವಿದ್ದರೆ ಮಾತ್ರ ಪ್ರವಾಸ ಮಾಡಬೇಕು ಅಲ್ಲದೇ ಅನಾವಶ್ಯಕವಾಗಿ ರಾತ್ರಿ ಸಮಯದಲ್ಲಿ ಸಂಚರಿಸಬಾರದು ಎಂದು ಮನವಿ ಮಾಡಿದ್ದಾರೆ.
ಸರಕಾರ ಹೊರಡಿಸಿದ ಕರೊನಾ ನಿಯಂತ್ರಣದ ಸುತ್ತೋಲೆಯನ್ನು ತಪ್ಪದೇ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here