ಕಲಬುರಗಿ, ಡಿ. 19: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರ ಮೇಲೆ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಆರೋಪಗಳು ಹಾಸ್ಯಾಸ್ಪದದಿಂದ ಕೂಡಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾದ ಮಹಾನಗರ ಜಿಲ್ಲಾಧ್ಯಕ್ಷ ದೇವೀಂದ್ರ ಸಿನ್ನೂರ ಅವರು ಹೇಳಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಗ್ರಾಮ ಪಂಚಾಯತ್ ಅಭಿವೃದ್ದಿಗಾಗಿ ಮತ್ತು ಚುನಾವಣೆ ಸಂದರ್ಭದಲ್ಲಿ ಅಡಂಬರದ ವ್ಯವಸ್ಥೆ ಆಗಬಾರದೆಂಬ ಉದ್ದೇಶದಿಂದ ಅವಿರೋಧವಾಗಿ ಆಯ್ಕಯಾಗುವ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂ. ಹಣ ಕೊಡುವುದಾಗಿ ಘೋಷಣೆ ಮಾಡಿದ್ದಾರೆ ಇದನ್ನು ಸಹಿಸದ ಚಿತ್ತಾಪೂರ ಶಾಸಕರಾದ ಪ್ರಿಯಾಂಕ್ ಖರ್ಗೆಯವರು ಚುನಾವಇಃ ಸಂದರ್ಭದಲ್ಲಿ ರೇವೂರ ಅವರು ಘೋಷಣೆ ಮಾಡಿದ್ದು ನೀತಿ ಸಂಹಿತೆಗೆ ಒಳಪಡುತ್ತದೆಂದು ಹೇಳಿರುವುದು ಹಾಸ್ಯಾಸ್ಪದ ಎಂದು ಸಿನ್ನೂರ ಆರೋಪಿಸಿದ್ದಾರೆ.
ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಕೆಕೆಆರ್‌ಡಿಬಿ ಅಧ್ಯಕ್ಷರಾದ ಮೇಲೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಕರೊನಾ ಸಂದರ್ಭದಲ್ಲಿ ಕೆಕೆಆರ್‌ಡಿಬಿಯಿಂದ ಅನೇಕ ಮಹತ್ತರ ಕಾರ್ಯಕ್ರಮಗಳು ಹಾಕಿಕೊಂಡಿದ್ದನ್ನು ಶಾಸಕ ಪ್ರಿಯಾಂಕ್ ಅವರು ಮರೆತಿರಬಹುದೆಂದು ಸಿನ್ನೂರ ಹೇಳಿದ್ದಾರೆ.
ಮಾಜಿ ಸಚಿವರಾಗಿ ಇನ್ನೊಬ್ಬರ ಮೇಲೆ ಹರಿಹಾಯುವುದನ್ನು ಬಿಟ್ಟು, ಚಿತ್ತಾಪೂರ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವುದನ್ನು ಶಾಸಕ ಪ್ರಿಯಾಂಕ್ ಅವರು ಕಲಿಯಬೇಕು ಇಲ್ಲದಿವಾದರೇ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.