ಕಲಬುರಗಿಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು

0
1276

ಕಲಬುರಗಿ, ಡಿ. 19: ಚಳಿಗಾಲದಲ್ಲಿ ಕರೊನಾ ಸೋಂಕು ಹೆಚ್ಚಾಗುವ ಮುನ್ಸೂಚನೆಯಿದ್ದರೂ, ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮವಾಗಿ ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ಹೊಸ 50 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಇತ್ತೀಚಿನ ಕಳೆದ ಒಂದುವರೆ ತಿಂಗಳಿAದ ಹತೋಟಿಯಲಿದ್ದ ಕರೊನಾ ಪ್ರಕರಣಗಳು ಈ ಧೀಡಿರವಾಗಿ ಹೆಚ್ಚಳವಾಗಿದೆ.
ಶನಿವಾರ ವರದಿಯಾದಂತೆ ಒಟ್ಟು 50 ಹೊಸ ಕರೊನಾ ಪ್ರಕರಣಗಳಲ್ಲಿ 21 ಪ್ರಕರಣಗಳು ಜಿಲ್ಲೆಯಾದ್ಯಂತ ವರದಿಯಾದರೆ ಉಳಿದ 29 ಪ್ರಕರಣಗಳು ಕಲಬುರಗಿ ನಗರದ ಒಂದರಲ್ಲೆ ದಾಖಲಾಗಿವೆ.
19 ಪ್ರಕರಣಗಳಂತೂ 50 ವಯಸ್ಸು ಮೇಲ್ಟಟ್ಟವರಿಗೆ ಕರೊನಾ ಸೋಂಕು ತಗುಲಿದೆ ಬಗ್ಗೆ ಎಂಸಿಎAಆರ್ ವರದಿ ಮಾಡಿದೆ.
ಇಂದು ಆಸ್ಪತ್ರೆಯಿಂದ 17 ಜನರು ಸೋಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ 20865 ಜನರಿಗೆ ಸೋಂಕು ತಗುಲಿದ್ದು, ಅದರಲ್ಲಿ 20139 ಜನರು ಸೋಂಕಿನಿAದ ಗುಣಮುಖರಾಗಿದ್ದಾರೆ. ನಗರ ಪ್ರದೇಶದಲ್ಲಿ 169 ಮತ್ತು ಗ್ರಾಮೀಣ ಭಾಗದಲ್ಲಿ 57 ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ ಒಟ್ಟು ಕರೊನಾ ಸೋಂಕಿನಿAದಾಗಿ 320 ಜನರು ಸಾವಿಗೀಡಾಗಿದ್ದಾರೆ.

LEAVE A REPLY

Please enter your comment!
Please enter your name here