ನಿಂಬರ್ಗಾ ಶ್ರೀ ಶರಣಬಸವೇಶ್ವರ ಜಾತ್ರೆ ರದ್ದು

0
1011

ಆಳಂದ, ಡಿ. 18: ತಾಲೂಕಿನ ಸುಕ್ಷೇತ್ರ ನಿಂಬರ್ಗಾ ಗ್ರಾಮದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಈ ಭಾರಿ ಕೋವಿಡ್ ಕಾರಣದಿಂದ ರದ್ದುಗೊಳಿಸಲಾಗಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಸ್.ಮಿಟೆಕಾರ ತಿಳಿಸಿದ್ದಾರೆ.
ಡಿಸೆಂಬರ್ 29 ರಿಂದ 31ರ ವರೆಗೆ ನಡೆಯಬೇಕಿದ್ದ ಈ ಜಾತ್ರಾ ಮಹೋತ್ಸವದಂಗವಾಗಿ
ಪ್ರತಿವರ್ಷ ಪದ್ಧತಿಯಂತೆ ಪೂರಾಣ ಪ್ರವಚನ ಕಾರ್ಯಕ್ರಮ ನಡೆಯುತ್ತಿತ್ತು. ಉಚ್ಚಾಯಿ, ಭವ್ಯ ರಥೋತ್ಸವ, ಕುಸ್ತಿ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದವು.
ಆದರೆ ಈ ಭಾರಿ ಕೊರೊನಾ ಭೀತಿ ಇರುವುದರಿಂದ ಎಲ್ಲಾ ಉತ್ಸವಗಳನ್ನು ಸರ್ಕಾರದ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ.
ಸಂಪ್ರದಾಯದAತೆ ಕೇವಲ ಮಹಾಪೂಜೆ ಮಾತ್ರ ಮಾಡಲಾಗುತ್ತದೆ. ಜಾತ್ರೆ ರದ್ದುಪಡಿಸಿರುವುದರಿಂದ ಭಕ್ತರು ದೇವಸ್ಥಾನಕ್ಕೆ ಬರುವುದು ಬೇಡ ಮನೆಯಲ್ಲೇ ಇದ್ದು ದೇವರನ್ನು ಪ್ರಾರ್ಥಿಸುವಂತೆ ಮನವಿ ಮಾಡಲಾಗಿದೆ.

LEAVE A REPLY

Please enter your comment!
Please enter your name here