ಡಿ. 20ರಂದು ರಾಯರ ಮೃತ್ತಿಕಾ ವೃಂದಾವನದ ಪ್ರತಿಷ್ಠಾಪನೆ

0
931

ಕಲಬುರಗಿ, ಡಿ. 18: ನಗರದ ಜಗತ್ ಬಡಾವಣೆಯಲ್ಲಿರುವ ಅನ್ನಪೂರ್ಣ ಕ್ರಾಸ್ ಹತ್ತಿರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಲಿಯುಗದ ಕಾಮಧೇನು ಕಲ್ಪವೃಕ್ಷಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ವೃಂದಾವನದ ಪ್ರತಿಷ್ಠಾಪನೆ ಕಾರ್ಯಕ್ರಮವು ಡಿಸೆಂಬರ್ 20ರಂದು ನಡೆಯಲಿದೆ.
ಪಂಡಿತ ರಾಮಾಚಾರ್ಯ ಅವಧಾನಿ ಮಣೂರ ಅವರಿಂದ ವೃಂದಾನವನದ ಪ್ರತಿಷ್ಠಾಪನೆ ನೆರವೇರಿಸಲಾಗುವುದು.
ಶ್ರೀ ಗುರುರಾಜ ಸೇವಾ ಸಮಿತಿ ಹಾಗೂ ಶ್ರೀ ಗುರುಸಾರ್ವಭೌಮ ಭಜನಾ ಮಂಡಳಿಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಂಗವಾಗಿ 20ರಂದು ಬೆಳಿಗ್ಗೆ ಪ್ರಾತಃಕಾಲ 7 ರಿಂದ 8ರ ವರೆಗೆ ವಿಷ್ಣು ಸಹಸ್ರನಾಮ ಅಷ್ಟೋತ್ತರ ಶ್ರೀ ಪೂರ್ಣ ಪ್ರಜ್ಞ ಪಾರಾಯಣ ಸಂಘದವತಿಯಿAದ ನಡೆಯಲಿದ್ದು, ಪ್ರಾತಃ 9 ಗಂಟೆಗೆ ರಾಯರ ವೃಂದಾವನ ಪ್ರತಿಷ್ಠಾಪನೆ ನಡೆಯಲಿದೆ.
ಪ್ರಾತಃ 9.30 ರಿಂದ 1.00ರ ವರೆಗೆ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭಕ್ಕೆ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಅವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ ಶಿಕ್ಷಕರಾದ ವಾಸುದೇವರಾವ ರಾಜಪುರೋಹಿತ, ಚಲನಚಿತ್ರ ನಟ ರವಿಕುಮಾರ, ಮಹಾನಗರಪಾಲಿಕೆ ಸದಸ್ಯೆ ಶ್ರೀಮತಿ ಜಗದೇವಿ ಮಲ್ಲಿಕಾರ್ಜುನ ಸೋಮಾ ಅವರುಗಳು ಆಗಮಿಸಲಿದ್ದಾರೆ.
ಸಂಗೀತಗಾರರು ಹಾಗೂ ಚಿತ್ರಕಲಾವಿದರಾದ ಹಳ್ಳೇರಾವ ಕುಲಕರ್ಣಿ ಕೆಂಭಾವಿ ಹಾಗೂ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಬಸವರಾಜ ಭಂಟನೂರ ಸೇರಿದಂತೆ ಇನ್ನಿತರ ಭಜನಾ ಮಂಡಳಿಯಿAದ ನೆರವೇರಲಿದೆ.
ಮಧ್ಯಾಹ್ನ 1.00 ರಿಂದ 4.00ರ ವರೆಗೆ ತೀರ್ಥ ಪ್ರಸಾದ ನಂತರ ವಿವಿಧ ಕಾರ್ಯಕ್ರಮಗಳು ರಾತ್ರಿ 8.00ರ ವರೆಗೆ ನಡೆಯಲಿವೆ.
ಭಕ್ತಾದಿಗಳು ತನು, ಮನ, ಧನದಿಂದ ಸೇವೆ ಮಾಡಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ, ಆಶೀರ್ವಾದ ಪಡೆಯಬೇಕೆಂದು ಕೋರಿದ್ದಾರೆ.

LEAVE A REPLY

Please enter your comment!
Please enter your name here