ಶಹಾಬಾದನಲ್ಲಿಯ ಶರಣಬಸವೇಶ್ವರ ದೇವಾಲಯದ ಹುಂಡಿ ಒಡೆದು ಕಳ್ಳತನ

0
1232

ಕಲಬುರಗಿ ಡಿ: 17:ಶಹಾಬಾದ್ ಪಟ್ಟಣದ ಪ್ರಸಿದ್ಧ ಶರಣಬಸವೇಶ್ವರ್ ದೇವಾಲಯದ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ಮಂಗಳವಾರದoದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರಣಬಸವೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಹುಂಡಿಯನ್ನು ಮಂದಿರದ ಹಿಂಭಾಗದ ಖುಲ್ಲಾ ಜಾಗದಲ್ಲಿ ತೆಗೆದುಕೊಂಡು ಹೋಗಿ ಬೀಗವನ್ನು ಒಡೆದು ನೋಟುಗಳನ್ನು ಮಾತ್ರ ತೆಗೆದುಕೊಂಡು, ನಾಣ್ಯಗಳನ್ನು ಬಿಟ್ಟು ಹೋಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೋಲಿಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here