ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಸಕಾಲ ಸಪ್ತಾಹ

0
932

ಕಲಬುರಗಿ, ಡಿ. 12: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿಸೆಂಬರ್ 14 ರಿಂದ 20 ರವರೆಗೆ ಸಕಾಲ ಸಪ್ತಾಹವನ್ನು ಕೈಗೊಳ್ಳಲಾಗಿದೆ.
ಅಗ್ನಿಶಾಮಕ ಇಲಾಖೆಯಲ್ಲಿ 05 ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿ ತಂದಿದ್ದು ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಇಲಾಖೆಯಲ್ಲಿ ಸಪ್ತಾಹವನ್ನು “ಹಮ್ಮಿಕೊಳ್ಳಲಾಗಿದೆ. ಹೊಸ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ. ನಿಗದಿತ ಕಾಲಮಿತಿಯಲ್ಲಿ ಏಶೇವಾರ, ಮಾಡಲಾಗುವುದು, ಸಪ್ತಾಹದ ಅಂತ್ಯದಲ್ಲಿ ವಿಲೇವಾರಿ ಮಾಡಲಾದ ಅರ್ಜಿಗಳ ಕುರಿತು ಸಕಾಲ ಮಿಷಿನ್‌ಗೆ ವರದಿ ನೀಡಲಾಗುತ್ತದೆ.
ಅಗ್ನಿಶಾಮಕ ಇಲಾಖೆಯಲ್ಲಿ 05 ಸೇವೆಗಳಾದ 1) ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ. ಅಗ್ನಿಶಾಮಕ ಇಲಾಖೆಯಿಂದ ನೀಡಲಾದ ನಿರಾಕ್ಷೇಪಣಾ ಪ್ರಮಾಣ ಪತ್ರ 2) ಬಹುಮಹಡಿ ಕಟ್ಟಡಗಳಿಗೆ. ನಿರ್ಮಾಣದ ನಂತರದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ಕ್ರಿಯರೆನ್ಸ್ ಪ್ರಮಾಣ ಪತ್ರ 3) ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರಶಿಕ್ರೆಯೆ 4) ಅಪಘಾತ, ನೈಸರ್ಗಿಕ ವಿಪತ್ತು ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆ ತುರ್ತು ಕರೆಗಳಿಗೆ ಪ್ರತಿಕ್ರಿಯೆ ಮತ್ತು 5) ಪಟಾಕಿಗಳ ರೈಸನ್ಸ್ಗಾಗಿ ನಿರಾಕ್ಷೇಪಣಾ ಪತ್ರವನ್ನು ಸಕಾಲದಡಿಯಲ್ಲಿ ಸಂಯೋಜಿತಗೊAಡಿರುತ್ತವೆ. ಸಂಯೋಜಿತಗೊAಡಿರುವ ಸೇವೆಗಳನ್ನು ಸಾರ್ವಜನಿಕರು ವೆಚ್‌ಸೈಟ್‌ನಲ್ಲಿಯೂ ವೀಕ್ಷಿಸಬಹುದು, ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here