ಕಳುವಾದ ಎತ್ತುಗಳನ್ನು 24 ಗಂಟೆಯಲ್ಲಿ ಪತ್ತೆಮಾಡಿದ ನರೋಣಾ ಪೊಲೀಸರು

0
956

ಆಳಂದ, ಡಿ. 11: ಕಳುವಾದ ಎತ್ತುಗ ಳನ್ನು 24 ಗಂಟೆಗಳಲ್ಲಿ ನರೋಣಾ ಪೋ ಲಿಸರು ಪತ್ತೇ ಮಾಡಿ, ಆರೋಪಿ ಗಳನ್ನು ಬಂಧಿಸಿದ್ದಾರೆ.
ನರೋಣಾ ಪೊಲೀಸ್ ಠಾಣೆಯ ಹದ್ದಿಯಲ್ಲಿ ಕಳ್ಳತನವಾದ ಜಾನುವಾರುಗಳ ಪತ್ತೆ ಕುರಿತು ತಂಡ ರಚಿಸಿದ್ದು ಕರ್ತವ್ಯದ ಲ್ಲಿದ್ದಾಗ ಗುಂಜ ಬಬಲಾದ ಕಡೆಯಿಂದ ಒಂದು ಮಿನಿ ಗೂಡ್ಸ್ ವಾಹನದಲ್ಲಿ ಎತ್ತುಗಳನ್ನು ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದ ವಾಹನವನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.
ಪೊಲೀಸ್ ಜೀಪನ್ನು ಕಂಡು ವೇಗÀ ವಾಗಿ ಕಚ್ಚಾ ರೋಡಿಗೆ ತಿರುಗಿಸಿಕೊಂಡು ಹೋಗುತ್ತಿರುವಾಗ ಅವರ ಮೇಲೆ ಬಲ ವಾದ ಸಂಶಯ ಬಂದ ಕಾರಣ ತಂಡ ದವರು ಬೆನ್ನುಹತ್ತಿ ಹಿಡಿದಾಗ ವಾಹನದಲ್ಲಿ ಎರಡು ಎತ್ತು ಮತ್ತು 3 ಜನ ವ್ಯಕ್ತಿಗಳು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಶ್ರೀಶೈಲ್ @ ತಿಪ್ಪಣ್ಣಾ ತಂದೆ ಶಂಕರ ನರೋಣೆಕರ ಸಾ: ಗುಂಜಬಬಲಾದ ಸಾಗರ ತಂದೆ ಚಂದು ರಾಠೋಡ್, ಸಾ:ಆಶ್ರಯ ಕಾಲೋ ನಿ ಸೇಡಂ, ಮಾರುತಿ ತಂದೆ ಗೋಪಾಲ ರಾಠೊಡ್, ತರಿತಾಂಡಾ, ಶಾಹಾಬಾz ಎಂಬ ಮೂರು ಜನರು ಬಂಧಿಸಿಲಾಗಿದೆ.
ಈ ದಾಳಿಯು ನರೋಣ ಪಿಎಸ್‌ಯ ಉದಂಡಪ್ಪ, ಎ.ಎಸ್.ಐ. ದೇವೇಂದ್ರಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶರಣಗೌಡ, ಶಾಂತಕುಮಾರ, ರಾಮಲಿಂಗ, ಬಸವ ರಾಜ ಮತ್ತು ಸತೀಶ ಅವರುಗಳು ದಾಳಿ ಮಾಡಿದರು.
ಆಳಂದ ವೃತ್ತರ ನಿರೀಕ್ಷಕರ ಮಾರ್ಗ ದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.
ನರೋಣಾ ಪೊಲೀಸ್ ಠಾಣೆಯಲ್ಲಿ ಗುರುಲಿಂಗಪ್ಪಾ ತಂದೆ ಚನ್ನಬಸಪ್ಪಾ ಹೀರಾ ಸಾ:ನರೋಣಾ ಇವರ ದೂರಿನ ಮೇರೆಗೆ ಇವರ ಎರಡು ಎತ್ತುಗಳು ಅಂದಾಜು ಕಿಮ್ಮತ್ತು 1,50,000/- ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನ ಸಂ ಕೆ.ಎ-32 ಸಿ-1924 ನೇದ್ದನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ವಿಚಾರಣೆ ಮಾಡಲಾಗಿ ಆರೋಪಿಗಳು ಸುಮಾರು ಎರಡೂವರೆ ತಿಂಗಳ ಹಿಂದೆ ನಿಂಬರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಾಡ್ಯಾಳ ಗ್ರಾಮ ಸೀಮಾಂತರದಲ್ಲಿ ಕಟ್ಟಿರುವ ಶ್ರೀ.ವಿಠಲ್ ತಂದೆ ಖಂಡೇರಾವ ಮದರಿ ರವರಿಗೆ ಸಂಬAಧಪಟ್ಟ ಎರಡು ಎತ್ತುಗಳು ಒಂದು ಆಕಳು ಮತ್ತು ಒಂದು ಹೋರಿಕರ ಕಳ್ಳತನಮಾಡಿ ಮಳಖೇಡ ದನಗಳ ಸಂತೆಯಲ್ಲಿ ಮಾರಾಟಮಾಡಿ ಬಂದ ಹಣವನ್ನು ಹಂಚಿಕೊAಡು ಖರ್ಚು ಮಾಡಿದ್ದು, ಆ ಹಣದಲ್ಲಿ ಉಳಿದ 41900 ರೂ ಮೂರು ಜನರಿಂದ ಜಪ್ತಿ ಮಾಡ ಲಾಗಿದೆ.
ಈ ಬಗ್ಗೆ ನಿಂಬರ್ಗಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ 3 ಜನ ಆರೋಪಿತರಿಂದ ಕಳ್ಳತನ ಮಾಡಿದ ಒಟ್ಟು ಎರಡು ಎತ್ತುಗಳು ಒಂದು ಮಿನಿಗೂಡ್ಸ ವಾಹನದ ಅಂ.ಕಿ 2,00,000/- ಹಾಗೂ ನಗದು 41900/- ರೂಪಾಯಿ ಜಪ್ತಿಮಾಡಿದ್ದು ಹೀಗೆ ಒಟ್ಟು ಅಂದಾಜು ಕಿಮ್ಮತ್ತು 3,91,900/- ರೂ ಮೌಲ್ಯದ ಕಳ್ಳತನವಾದ ಮಾಲು ಮತ್ತು ಕಳ್ಳತನಕ್ಕೆ ಬಳಸಿದ ವಾಹನ ವಶಪಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here