ಉದ್ಯಮಿ ರಂಕಾ ಕೊಲೆ ಪ್ರಕರಣ ನಾಲ್ವರು ಆರೋಪಿಗಳ ಬಂಧನ

0
1088

ಕಲಬುರಗಿ, ಡಿ.11: ನಗರದ ಗೋದುತಾಯಿ ಕಾಲೋನಿಯ ಶಿವ ಮಂದಿರ ಹತ್ತಿರ ಪಿ.ಓ.ಪಿ. ಉದ್ಯಮಿ ಸುನೀಲ್ ರಂಕಾ ಕೊಲೆ ಪ್ರಕರಣದ ಬೇಧಿಸಿದ ಅಶೋಕ ನಗರದ ಪೋಲಿಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆಗಸ್ಟ 27ರಂದು ಸುನೀಲ್ ರಂಕಾ (42) ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ಅವರ ಹಣದ ಬ್ಯಾಗ ಸಮೇತ ಪರಾರಿಯಾಗಿದ್ದ ನಾಲ್ವರು ಆರೋಪಿಗಳಾದ ಬಿದ್ದಾಪುರ ಕಾಲೋನಿಯ ಅಂಬ್ರೀಷ್ ಸುಭಾಷ ರಾಠೋಡ್, ಶರಣಸಿರಸಗಿ ತಾಂಡಾದ ರಾಜಶೇಖರ ಅಲಿಯಾಸ್ ಶೇಖರ ರೇವಣಸಿದ್ಧ ರಾಠೋಡ್, ವಿಜಯಪುರ ಜಿಲ್ಲೆಯ ಖತೀಜಾಪೂರದ ನಾಮದೇವ ಹೇಮು ಲೋಣಾರಿ ಮತ್ತು ಹಡಗಿಲ್ ಹಾರುತಿ ಗ್ರಾಮದ ಗುಂಡು ಶರಣಪ್ಪ ರಾಠೋಡ್ ಎಂಬುವವರನ್ನು ಬಂಧಿಸಿ ಒಂದು ಹೊಂಡಾ ಶೈನ್ ಬೈಕ್, 75 ಸಾವಿರ ರೂ.ನಗದು ಮತ್ತು 4 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.
ಆಗಸ್ಟ್ 27 ರಂದು ಸಂಜೆ 7 ಗಂಟೆ ಸುಮಾರಿಗೆ ಉದ್ಯಮಿ ಸುನೀಲ್ ರಂಕಾ ಅವರು ತಮ್ಮ ಅಂಗಡಿಯಿAದ ಹಣದ ಬ್ಯಾಗ್ ತೆಗೆದುಕೊಂಡು ಗೋದುತಾಯಿ ಕಾಲೋನಿಯ ಶಿವ ಮಂದಿರ ಹತ್ತಿರವಿರುವ ಮನೆ ಮುಂದೆ ಸ್ಕೂಟಿ ವಾಹನ ನಿಲ್ಲಿಸುತ್ತಿದ್ದಾಗ ಬೈಕ್ ಮೇಲೆ ಬಂದ ಮೂವರು ಹಣದ ಬ್ಯಾಗ್ ಕಸಿದುಕೊಂಡು ಎದೆಗೆ ಗುಂಡು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬAಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಯಾವುದೇ ಸುಳಿವು ಸಿಗದಂತೆ ಎಚ್ಚರಿಕೆಯಿಂದ ಕೊಲೆಗೈದು ಪರಾರಿಯಾಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.
ಕೃತ್ಯ ನಡೆದ ಸ್ಥಳದಿಂದ ಸುತ್ತಮುತ್ತಲ್ಲಿನ 50 ಸಿ.ಸಿ.ಕ್ಯಾಮೆರಾ ದೃಶ್ಯಾವಳಿ ಮತ್ತು 5000ಕ್ಕೂ ಹೆಚ್ಚಿನ ಜನರ ಮೊಬೈಲ್ ಕರೆಗಳ ಮಾಹಿತಿಯನ್ನು ಪರಿಶೀಲನೆ ಮಾಡಿ ಹಾಗೂ ವೈಜ್ಞಾನಿಕ ವಿಧಾನಗಳಿಂದ ಮತ್ತು ಬಾತ್ಮಿದಾರರು ನೀಡಿದ ಮಾಹಿತಿ ಕಲೆ ಹಾಕಿ ಕೊನೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಅಂಬ್ರೀಷ್ ರಾಠೋಡ್ ಗ್ರ‍್ಯಾನೇಟ್ಸ್ ಒಂದರಲ್ಲಿ ಕೆಲಸ ಮಾಡುತ್ತ ಪಕ್ಕದಲ್ಲೇ ಇದ್ದ ಸುನೀಲ್ ರಂಕಾ ಹಣದ ವ್ಯವಹಾರವನ್ನು ನೋಡಿ ತನ್ನ ಸ್ನೇಹಿತರಾದ ರಾಜಶೇಖರ, ಗುಂಡು ಮತ್ತು ಸಂಬAಧಿಕ ನಾಮದೇವ ಅವರಿಗೆ ಸುನೀಲ್ ರಂಕಾ ಬಳಿ ಇರುವ ಹಣದ ಬ್ಯಾಗ್ ಕಿತ್ತುಕೊಂಡು ಗುಂಡು ಹಾರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ರಾಜಶೇಖರ, ಗುಂಡು ಮತ್ತು ನಾಮದೇವ ಅವರು ಸುನೀಲ ರಂಕಾ ಅವರನ್ನು ಹಿಂಬಾಲಿಸಿ ಅವರ ಬಳಿ ಇದ್ದ ಹಣದ ಬ್ಯಾಗ್ ಕಿತ್ತುಕೊಂಡು ಎದೆಗೆ ಗುಂಡು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ತದನಂತರ ಆರೋಪಿಗಳು ಹೈಕೋರ್ಟ್ ಹತ್ತಿರ ಹೋಗಿ ಹಣದ ಬ್ಯಾಗ್ ಮತ್ತು ಪಿಸ್ತೂಲ್ ನ್ನು ಪ್ರಮುಖ ಆರೋಪಿ ಅಂಬ್ರಿಷ್ ಗೆ ನೀಡಿದ್ದು, ನಂತರ ಅಂಬ್ರೀಷ್ ಗುಂಡುಗೆ 20 ಸಾವಿರ ರೂಪಾಯಿ, ರಾಜಶೇಖರಗೆ 39 ಸಾವಿರ ಮತ್ತು ನಾಮದೇವನಿಗೆ 30 ಸಾವಿರ ರೂಪಾಯಿ ನೀಡಿ ಉಳಿದ 95 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದ. ನಂತರ ಅಂಬ್ರೀಷ್ ತನ್ನ ಸಂಬAಧಿಕ ನಾಮದೇವ ರಾಠೋಡ್ ಮದುವೆಗಾಗಿ 30.10.2020 ರಂದು ವಿಜಯಪುರ ಜಿಲ್ಲೆಯ ಖತೀಜಾಪೂರ ಗ್ರಾಮಕ್ಕೆ ಹೋಗಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ನ್ನು ತನ್ನ ಮಾವನ ಮನೆಯಲ್ಲಿ ಬಚ್ಚಿಟ್ಟಿದ್ದ. ಆ ನಂತರ ವಿಜಯಪುರ ಠಾಣೆ ಪಿಐ ಮತ್ತು ಸಿಬ್ಬಂದಿಗಳು ಆರೋಪಿ ಅಂಬ್ರೀಷ್ ನನ್ನು ಬಂಧಿಸಿ ಪಿಸ್ತೂಲ್ ಜಪ್ತಿ ಮಾಡಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪಿಸ್ತೂಲ್ ನ್ನು ತನ್ನ ಸ್ನೇಹಿತ ವಿಜಯಪುರ ಜಿಲ್ಲೆಯ ಹಂಚಿನಾಳ ಗ್ರಾಮದ ಪ್ರಕಾಶ ಅಲಿಯಾಸ್ ಪ್ರೇಮ್ ರಜಪೂತ ಬಳಿ 28 ಸಾವಿರ ರೂಪಾಯಿಗೆ ಖರೀದಿಸಿದ್ದಾಗಿ, ಪ್ರಕಾಶನಿಗೆ ಇಂಡಿ ತಾಲ್ಲೂಕಿನ ನಂದ್ರಾಳ ಗ್ರಾಮದ ಇಜಾಜ್ ಪಟೇಲ್ ಪಿಸ್ತೂಲ್ ನೀಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದ. ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ ನಗರ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ, ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು, ಉಪ ಪೊಲೀಸ್ ಆಯುಕ್ತ (ಸಂಚಾರಿ ಮತ್ತು ಅಪರಾಧ), ಎ ಉಪ ವಿಭಾಗದ ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ ಅಶೋಕ ನಗರ ಪೊಲೀಸ್ ಠಾಣೆಯ ಪಿಐ ಪಂಡಿತ ಸಂಗರ, ಪಿಎ??? ವಾಹೀದ್ ಕೋತ್ವಾಲ್, ಸಿಬ್ಬಂದಿಗಳಾದ ಗುರುಮೂರ್ತಿ, ಸಂಜುಕುಮಾರ, ಮಲ್ಲಿಕಾರ್ಜುನ, ಶಿವಲಿಂಗ, ಶರಣಗೌಡ ಪಾಟೀಲ, ಶಿವಶರಣಪ್ಪ, ಪ್ರಲ್ಹಾದ ಹಾಗೂ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ಕಪೀಲ್ ದೇವ್ ಮತ್ತು ಸಿಬ್ಬಂದಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಿದ್ರಾಮೇಶ್ವರ ಗಡದ ಹಾಗೂ ಸಿಬ್ಬಂದಿ ಸತತ 3 ತಿಂಗಳಿAದ ತನಿಖೆ ನಡೆಸಿ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here