ಕಲಬುರಗಿ.ಡಿ.9:ನಿಧಿ ಪತ್ತೆ ಶೋಧನೆ, ಭಾನಾಮತಿಯಂತರ ಬ್ಲಾö್ಯಕ್ ಮ್ಯಾಜಿಕ್ ಮಾಡುತ್ತೇವೆ ಎಂದು ಜನರನ್ನು ಯಾಮಾರಿಸುತ್ತಿದ್ದ ಇಬ್ಬರ ನಡುವೆ ಎರಡು ತಲೆ ಹಾವಿನ ವಿಚಾರದ ಹಿನ್ನೆಲೆಯಲ್ಲಿ ಉಂಟಾದ ಕಲಹ ವಿಕೋಪಕ್ಕೆ ತಿರುಗಿ, ಕತ್ತು ಸೀಳಿ ಬರ್ಬರವಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಇಬ್ಬರನ್ನು ಕಮಲಾಪೂರ ಪೋಲಿಸರು ಬಂಧಿಸಿದ್ದಾರೆ.
ಕೊಲೆ ಮಾಡಿ ಶವವನ್ನು ತಂದು ಕಮಲಾಪುರ ತಾಲೂಕಿನ ಸೊಂತ-ಪಟವಾರಿ ಗ್ರಾಮದ ಬಳಿಯಲ್ಲಿರುವ ಮುಲ್ಲಾಮಾರಿ ಸೇತುವೆಯಲ್ಲಿ ಬಿಸಾಕಿದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮೂಲಕ ನ.5ರಂದು ಸೊಂತ-ಪಟವಾರಿ ರಸ್ತೆಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಸಿಪಿಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ತಿಂಗಳ ಕಾಲ ಬಿಟ್ಟು ಬಿಡದೆ ತನಿಖೆ ನಡೆಸುವ ಮೂಲಕ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಕೊಲೆಯಾದ ವ್ಯಕ್ತಿ ನೆರೆಯ ಬಸವ ಕಲ್ಯಾಣ ತಾಲೂಕಿನ ಕೊಡಂಬಲ್ ಗ್ರಾಮದ ಸಂಜೀವಕುಮಾರ ಅಲಿಯಾಸ್ ಸಂಜಪ್ಪ ವಗ್ಗೆ (30) ಎಂದು ಗುರುತಿಸಲಾಗಿದೆ.
ಕೊಲೆಯನ್ನು ಮಾಡಿದ ಅದೇ ಗ್ರಾಮದ ಮತ್ತು ಕೊಲೆಯಾಗಿರುವ ವ್ಯಕ್ತಿಯ ಜತೆಗೂಡಿ ನಿಧಿ ಶೋಧ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದ್ದ ರಾಮಚಂದ್ರ ಚೆಲ್ಲೆಣ್ಣನವರ (58) ಮತ್ತು ಆತನ ಪುತ್ರ ಭಗವಂತ (19) ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಿಸಿದ್ದ ಮಾರಕಾಸ್ತ್ರಗಳನ್ನು, ಶವ ಸಾಗಿಸಲು ಬಳಸಿದ ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ಎರಡು ತಲೆಯ ಹಾವನ್ನು ರಕ್ಷಣೆ ಮಾಡಿದ್ದಾರೆ.
ಎರಡು ತಲೆ ಹಾವಿಗೆ ಹೆಚ್ಚಿನ ಕಿಮ್ಮತ್ತು ಬಂದಿದ್ದರಿAದ ಅದನ್ನು ಅ ವ್ಯಕ್ತಿ ಮರಳಿ ಕೊಡದೆ, ತಾನೊಬ್ಬನೆ ಮಾರಿಕೊಂಡು ಹಣ ಮಾಡಲು ರಾಮಚಂದ್ರನ ಮನೆಯಲ್ಲಿಯೇ ಇಟ್ಟುಕೊಂಡಿರಬಹುದು ಎಂದು ಅಂದುಕೊAಡಿದ್ದ. ಆ ಹಿನ್ನೆಲೆಯಲ್ಲಿ ನ.3ರಂದು ರಾತ್ರಿ ಅಮಲಿನಲ್ಲಿ ಸಂಜೀವಪ್ಪ, ರಾಮಚಂದ್ರನ ಮನೆಗೆ ಹೋಗಿದ್ದಾನೆ. ಆಗ ಕಟ್ಟೆಯ ಮೇಲೆ ಮಲಗಿಕೊಂಡಿದ್ದ ಪುತ್ರಿಯ ಬಟ್ಟೆ ಎಳೆದಿದ್ದಾನೆ. ಅಕೆ ಚೀರಿದಾಗ ಪಕ್ಕದಲ್ಲಿಯೇ ಮಲಗಿಕೊಂಡಿದ್ದ ಆಕೆಯ ಸಹೋದರ ಭಗವಂತ ಎದ್ದು ಯಾರು ಎಂದು ನೋಡಿದಾಗ, ಸಂಜೀವಪ್ಪಗೆ ಏಟು ಕೊಟ್ಟಿದ್ದಾನೆ.
ನಿಮ್ಮಪ್ಪ ಹಾವು ಮುಚ್ಚಿಟ್ಟಿದ್ದಾನೆ ಅದಕ್ಕೆ ಬಂದಿದ್ದಾನೆ ಎಂದು ಹೇಳಿದ್ದಾನೆ, ಆಗ ಅದು ಬೇರೆ ವಿಷಯ, ಸಹೋದರಿ ಬಟ್ಟೆ ಯಾಕೆ ಜಗ್ಗಿದೆ ಎಂದು ವಾಗ್ವಾದ ನಡೆದಿದೆ. ಆಗ ರಾಮಚಂದ್ರ ಎದ್ದು ಬಂದಾಗ ಜಗಳವಾಗಿದೆ. ಮನೆಯಲ್ಲಿದ್ದ ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷಿ ನಾಶಪಡಿಸಲು ಶವವನ್ನು ಕೌದಿಯಲ್ಲಿ ಸುತ್ತಿ ದ್ವಿಚಕ್ರ ವಾಹನದ ಮೇಲೆ ಹಾಕಿಕೊಂಡು 12 ಕಿಮಿ ದೂರದ ಸೊಂತ ಬಳಿಯ ಮುಲ್ಲಾಮಾರಿ ಹಳ್ಳದಲ್ಲಿ ಎಸೆದು ಹೋಗಿದ್ದಾರೆ.
ಕೆಲವೊಂದು ಸುಳಿವು ಆಧರಿಸಿ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ,ಡಿಎಸ್ಪಿ ತಾಯಪ್ಪ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಪಾಟೀಲ್, ಪಿಎಸ್‌ಐಗಳಾದ ಪರಶುರಾಮ ಭೀಮರಾವ ಮತ್ತು ಸಿಬ್ಬಂದಿ ಸಲೀಂ, ಕುಪೇಂದ್ರ, ರಾಘವೇಂದ್ರ,ಹುಸೇನ್ ಇತರರು ಕೂಡಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.