ರೈತರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ವಿರೋಧ ಪಕ್ಷಗಳು

0
977

ಬೆಂಗಳೂರು, ಡಿ. 8: ಕೇಂದ್ರ ಸರಕಾರದ ರೈತರ ಪರವಾರ ಮೂರು ವಿಧೆಯಕಗಳನ್ನು ಮೊದಲು ಒಪ್ಪಿಕೊಂಡ ವಿರೋಧ ಪಕ್ಷಗಳು ರಾಜಕೀಯ ಲಾಭವನ್ನಾಗಿಸಲು ರೈತರಿಗೆ ಮೋಸ ಮಾಡಲು ಹೊರಟಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೇಂದ್ರ ಸರಕಾರದ ನೂತನ ಭೂಸುಧಾರಣೆ ಸೇರಿದಂತೆ ರೈತರ ಪರವಾದ ಕಾಯ್ದೆಗೆ ಈ ಮೊದಲು ವಿರೋಧ ಪಕ್ಷಗಳು ಒಪ್ಪಿಕೊಂಡು ಈಗ ರೈತರ ನಡೆಸುತ್ತಿರುವ ಹೋರಾಟದಲ್ಲಿ ತಾವು ಬೆಳೆಬೆಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಸೇರಿದಂತೆ ಇನ್ನೂ ಹಲವಾರು ಪಕ್ಷಗಳು ಭಾರತ ಬಂದ್‌ನಲ್ಲಿ ಪಾಲ್ಗೊಳ್ಳುವ ಮೂಲಕ ರೈತರ ನೆರವೇಗೆ ಬಂದ ಬಗ್ಗೆ ತಮ್ಮ ಧೋರಣೆ ತೋರಿದ್ದು ಕೇವಲ ರೈತರ ಹಿತಕ್ಕಾಗಿ ಅಲ್ಲ, ಅದು ಆಯಾ ಪಕ್ಷಗಳು ಕಳೆದುಕೊಳ್ಳುತ್ತಿರುವ ಅಸ್ತಿತ್ವಕ್ಕೆ ಎಂಬತಾಗಿದೆ ಎಂದು ಖಾರವಾಗಿ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿAದ ಅವರ ಜನಪರ ಕೆಲಸ ಕಾರ್ಯಗಳನ್ನು ಸಹಿಸದ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿದು, ಜನರು ಪ್ರಧಾನಿಗಳು ಏನು ಎಂಬುದು ತಿಳಿದಿದ್ದಾರೆ, ಇವರಿಂದ ಜನರು ದಾರಿತಪ್ಪುವುದಿಲ್ಲ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here