ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಗರಿಗೆದರಿದ ರಾಜಕೀಯ ಚಟುವಟಿಕೆ

0
1617

(ರಾಜು ದೇಶಮುಖ)
ಕಳೆದ ತಿಂಗಳು 29ರಂದು ಕಲಬುರಗಿ ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶನಕ್ಕಾ ಸ್ಥಾನಕ್ಕೆ ಜಿದ್ದಾಜಿದ್ದಿಯ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಯಿತು. ಈಗ ಏನಿದ್ದರೂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೇ ಮಾತ್ರ ಬಾಕಿ ಉಳಿದಿದ್ದು, ಅದಕ್ಕೂ ಡಿ. 11 ಮುಹೂರ್ತ ಫಿಕ್ಸ್ ಆಗಿದೆ.
13 ಸದಸ್ಯ ಸ್ಥಾನದ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಗೆ 9 ಸದಸ್ಯರನ್ನು ಹೊಂದಿದ ಕಾಂಗೈಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ನಿರಾಯಸಿ ದೊರೆಯಲಿವೆ ಆದರೂ ಗರಿಗೆದರಿದ ರಾಜಕೀಯದಿಂದ ಏನು ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯಿದು ಈಗಾಗಲೇ 4 ಸ್ಥಾನಗಳನ್ನು ಹೊಂದಿದ್ದು ನಾಮನಿರ್ದೇಶಕ ಸ್ಥಾನಗಳನ್ನು ಸೇರಿ ಅದರ ಸಂಖ್ಯೆ 7ಕ್ಕೆ ಏರಿದೆ.
ಸರಳವಾಗಿ ಕಾಂಗೈ ಪಾಲು ಡಿಸಿಸಿಗೆ ಆಗಲಿದೆಯಾದರೂ, ಅಧಿಕಾರೂಢ ಬಿಜೆಪಿಯಿಂದ ತಂತ್ರಗಾರಿಕೆ ರಾಜಕೀಯ ನಡೆದಿದ್ದು, ಅದರಲ್ಲೂ ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷರ ಗಾದಿ ಶಾಸಕ ದರ್ಶನಾಪೂರ ಅವರ ಕೃಪಾಕಟಾಕ್ಷದಿಂದ ಆಗುವದಂತೂ ನಿಶ್ಚಿತವೆಂಬುದು ಈ ಹಿಂದಿನ ಹಲವಾರು ಚುನಾವಣೆಗಳೆ ಸಾಕ್ಷಿಯಾಗಿವೆ.
ಕಾಂಗೈ ಅಭ್ಯರ್ಥಿಯೊಬ್ಬರು ಮಾನಕರ ಅವರ ಗೆಲುವಿಗೆ ಕಾರಣವೆಂದು ಹೇಳಲಾಗಿದ್ದು, ಫಲಿತಾಂಶ ಬಂದ 3 ಗಂಟೆಗಳಲ್ಲಿಯೇ ಬ್ಯಾಂಕ್‌ನ ನಿರ್ದೇಶಕರಾಗಿ ಸೋತ ಅಭ್ಯರ್ಥಿಯನ್ನು ಬಿಜೆಪಿ ನೇಮಕ ಮಾಡಿದ್ದು ನೋಡಿದರೆ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜಕೀಯ ತಂತ್ರಗಾರಿಕೆಯ ಮೊರೆಹೋಗಿದಂತಾಗಿದೆ.
ಬಿಜೆಪಿಯಿAದ ಸ್ಪರ್ಧಿಸಿ ಸೋತ ಚಿಂಚೋಳಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೈಲೆಂದ್ರಕುಮಾರ ಅವರನ್ನು ತಮ್ಮದೆ ಸರಕಾರ ಇದ್ದರೂ ಬಿಜೆಪಿ ನಾಮನಿರ್ದೇಶನ ಮಾಡದಿರುವುದು ಬಿಜೆಪಿಯಿಂದ ಸೋತ ಅಭ್ಯರ್ಥಿಗಳಿಗೆ ತೀವ್ರ ನೋವುಂಟು ಮಾಡಿದೆ.
ಇನ್ನು ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿ ಮರುಗಳಿಗೆಯಲ್ಲಿಯೇ ಆಳಂದದ ಖಜೂರಿಯ ಅಶೋಕ ಸಾವಳೇಳಶ್ವರ ಅವರು ಕಾಂಗೈ ಸೇರಿರುವ ಮರ್ಮವಾದರೂ ಏನೆಂಬುದು ತಿಳಿದಿಲ್ಲವಾದರೂ, ಮತ್ತೆ ಅವರ ಬೆಂಬಲವನ್ನು ಬಿಜೆಪಿ ಪಡೆಯಲು ಹವಣಿಸುತ್ತಿದೆ.
ಇನ್ನೂ ಮಾಜಿ ಸಚಿವ ದಿ. ವೈಜನಾಥ ಪಾಟೀಲ್ ಅವರು ಪುತ್ರ ಹಾಗೂ ಕಾಂಗೈ ಬೆಂಬಲಿತ ಸದಸ್ಯ ಗೌತಮ ಪಾಟೀಲ್ ಅವರ ಬೆಂಬಲ ಪಡೆಯಲು ರಾಜ್ಯ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೂ ಬಿಜೆಪಿಯಿಂದ ಆಯ್ಕೆಯಾದ ಮಾನಕರ ಅವರ ಗೆಲುವಿಗೆ ಸಿದ್ರಾಮರೆಡ್ಡಿ ಸಹಾಯ ಮಾಡಿದರೆಂಬ ಗುಮಾನಿಯಿದೆ.
ಚುನಾವಣೆ ಅಧ್ಯಕ್ಷ ಸ್ಥಾನದ ಬಿರುಸಿನ ರಾಜಕೀಯ ಈಗ ಶರಣಬಸಪ್ಪ ದರ್ಶನಪೂರ ಅವರ ಮೇಲಿದ್ದು, ಈ ಎಲ್ಲ ಬೆಳವಣಿಗೆಗಳನ್ನು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವುರ ಅವರು ಕಾದುನೋಡಿವ ತಂತ್ರಕ್ಕೆ ಮೊರೆಹೋಗಿದ್ದಾರಾದರೂ, ಅವರು ಕೂಡಾ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ಡಿಸೆಂಬರ್ 11ರಂದು ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ ಯಾರು? ಉಪಾಧ್ಯಕ್ಷ ಯಾರು? ಎಂಬುದು ಅಂತೂ ಕುತೂಹಲ ಕಾರಿಯಾದರೂ, ಆಶ್ವಯಕರ ರೀತಿಯಲ್ಲಿ ನಡೆಯಲಿರುವದಂತೂ ನೂರನಕ್ಕೆ ನೂರು ಸತ್ಯವಾಗಿದೆ.

LEAVE A REPLY

Please enter your comment!
Please enter your name here