ಹೈದ್ರಾಬಾದ, ಡಿ. 4: ಹೈದ್ರಾಬಾದ ಮುನ್ಸಿಪಾಲ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಆಡಳಿತರೂಡ ಟಿಆರ್‌ಎಸ್ ತೀವ್ರ ಮುಖಭಂಗ ಅನುಭವಿಸಿದೆ.
ಒಟ್ಟು 150 ವಾರ್ಡಗಳ ಈ ಮುನ್ಸಿಪಲ್‌ನಲ್ಲಿ ಆಡಳಿತರೂಢ ಟಿ.ಆರ್.ಎಸ್. 55 ಸ್ಥಾನಗಳನ್ನು ಹಾಗೂ 4 ರಿಂದ 50ಕ್ಕೆ ತನ್ನ ಸಂಖ್ಯಾಬಲ ಏರಿಸಿಕೊಂಡ ಬಿಜೆಪಿ ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ಕೇಸರಿ ಧ್ವರ ಹಾರಿಸುವ ಮುನ್ಸೂಚನೆ ನೀಡಿದೆ.
ಅಕಬರೋದ್ದಿನ್ ಓವಸಿ ನೇತೃತ್ವದ ಎಂಐಎA ಪಕ್ಷವು 44 ಸ್ಥಾನಗಳನ್ನು ಪಡೆದಿದೆ. ಇನ್ನು ಕಾಂಗ್ರೆಸ್‌ಗೆ ಇಲ್ಲಿಯೂ ಕೂಡಾ ಹೀನಾಯ ಸ್ಥಿತಿಯಾಗಿದ್ದು, ಕೇವಲ 2 ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಚಾರಮೀನಾರ ಒಟ್ಟು 36 ಸ್ಥಾನಗಳಲ್ಲಿ ಬಿಜೆಪಿ 8 ಸ್ಥಾನಗಳನ್ನು ಮತ್ತು ಎಂಐಎA 28 ಸ್ಥಾನಗಳನ್ನು ಪಡೆದಿವೆ. ಇನ್ನು ಖೈರತಾಬಾದ ನಲ್ಲಿ ಒಟು 27 ಸ್ಥಾನಗಳ ಪೈಕಿ ಟಿಆರ್.ಎಸ್. 5, ಬಿಜೆಪಿ 10 ಮತ್ತು ಎಂಐಎA 13 ಸ್ಥಾನಗಳನ್ನು ಬಾಚಿಕೊಂಡಿವೆ.
ಕುಕಟಪಲ್ಲಿಯ 22 ಸ್ಥಾನಗಳಲ್ಲಿ ಟಿಆರ್‌ಎಸ್ 20 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿವೆ.
ಎಲ್‌ಬಿ ನಗರನ 23 ಸ್ಥಾನಗಳಳ್ಲಿ ಬಿಜೆಪಿ 15 ಟಿಆರ್‌ಎಸ್ 6 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಜಯಗಳಿಸಿದೆ.
ಸಿಕಂದ್ರಾಬಾದನ 27 ಸ್ಥಾನಗಳಲ್ಲಿ ಬಿಜೆಪಿ14, ಟಿಆರ್‌ಎಸ್ 12, ಎಂಐಎA 1 ಸ್ಥಾನಗಳನ್ನು ಗಳಿಸಿವೆ. ಸಿರಿಲಿಂಗAಪಲ್ಲಿಯ 15ರ ಪೈಕಿ 13 ಟಿಆರ್‌ಎಸ್, ಬಿಜೆಪಿ ಮತ್ತು ಎಂಐಎA ತಲಾ ಒಂದೊAದು ಸ್ಥಾನಗಳನ್ನು ಗಳಿಸಿವೆ.
ಇಲ್ಲಿ ಅಧಿಕಾರಕ್ಕೆರಲು ಮ್ಯಾಜಿಕ್ ನಂ. 76ರ ಅಗತ್ಯವಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದೆ ಅತಂತ್ರ ಮುನ್ಸಿಪಾಲ್ ಆಗಿದೆ.
Home Uncategorized ಗ್ರೇಟರ್ ಹೈದರಾಬಾದ ಮುನ್ಸಿಪಲ್ ಚುನಾವಣೆ ಫಲಿತಾಂಶ ಅತ0ತ್ರ ಸ್ಥಿತಿ: ಆಡಳಿತರೂಢ ಟಿಆರ್‌ಎಸ್‌ಗೆ ಮುಖಭಂಗ