ಚೌಕ್ ಪೋಲಿಸ್ ಪಿಐ ನಾಯ್ಕ ನೇತೃತ್ವದಲ್ಲಿ ದಾಳಿ: ಮತ್ತೇ ರೌಡಿಶೆಟರ್ ಮಾರ್ಕಿಟ್ ಸತ್ಯಾ ಬಂಧನ

0
1720

ಕಲಬುರಗಿ ನ 14 ಇತ್ತೀಚೆಗೆಷ್ಟ ನ್ಯಾಯಾ ಲಯದಿಂದ ಜಾಮೀನು ಪಡೆದು ಹೊರ ಬಂದ ಮಾಕೇಟ್ ಸತ್ಯಾ ಅಲಿಯಾಸ ಸತೀಷ ರೆಡ್ಡಿನನ್ನು ಮತ್ತೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದಲ್ಲಿ ಈಚೆಗೆ ನಡೆದ ಎರಡು ಕಡೆ ದರೋಡೆಗೆ ಯತ್ನಿಸಿದ ಪ್ರಕರಣಗಳಿಗೆ ಸಂಬAಧಿಸಿದAತೆ ಮಾರ್ಕೆಟ್ ಸತ್ಯಾನೇ ಅ ದರ ರೂವಾರಿಯಾಗಿದ್ದ. ಅಲ್ಲದೆ ಕೋಕಾ ಕಾಯ್ದೆಯಡಿ ಬಂಧಿತನಾಗಿ ನ್ಯಾಯಾಲ ಯದಿಂದ ಜಾಮೀನು ಪಡೆದುಕೊಂಡ ಬಳಿ ಮರಳಿ ನ್ಯಾಯಾಲಯಕ್ಕೆ ಹಾಜರಾಗದೆ ಇರು ವುದರಿಂದ ವಾರೆಂಟ್ ಹೊರಡಿಸಲಾಗಿತ್ತು.
ಈ ಎರಡು ಕೇಸ್‌ಗಳ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣದ ಹೈದರಾಬಾದನ ಸೈದಾಬಾದನಲ್ಲಿ ಕಲಬುರಗಿ ಪೊಲೀಸರು ಕಳೆದ ರವಿವಾರ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಸತ್ಯಾನನ್ನು ಕರಕೊಂಡು ಕಲಬುರಗಿ ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಆಗ ಗ್ರಾಮೀಣ ಮತ್ತು ವಿಶ್ವವಿದ್ಯಾಲಯ ಠಾಣೆಯ ವ್ಯಾಪ್ತಿಯಲ್ಲಿ ವರ ದಿಯಾಗಿರುವಂತೆ ದರೋಡೆಗೆ ಯತ್ನಿಸಿದ ರಾಹುಲ್ ತಂದೆ ಅಶೋಕ ಹೊನ್ನಳ್ಳಿ ಗ್ಯಾಂಗಿ ನವರಿಗೆ ಸಹಕಾರ ನೀಡಿದ್ದಾಗಿ ಹೇಳಿಕೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಮೀಷನರ್ ಎನ್. ಸತೀಶ ಕುಮಾರ, ಡಿಸಿಪಿ ಕಿಶೋರಬಾಬು, ಎಸಿಪಿ ಗಿರೀಶ ಎಸ್.ಬಿ. ಮಾರ್ಗದರ್ಶ ನದಲ್ಲಿ ಚೌಕ್ ಇನ್ಸ್ಸ್ಪೆಕ್ಟರ್ ಎಸ್.ಆರ್. ನಾಯಕ, ಸಿಬ್ಬಂದಿ ರಾಜಕುಮಾರ ಚೌಧರಿ ಹಾಗೂ ತೌಸೀಪ್ ಹುಸೇನ್ ಸೇರಿಕೊಂಡು ಹೈದರಾಬಾದನ ಸೈದಾಬಾದನಲ್ಲಿರುವ ಮನೆ ಯೊಂದರ ಮೇಲೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಕಾ ಕಾಯ್ದೆಯಡಿ ಬಂಧನಕ್ಕೆ ಜಾಮೀನು ರಹೀರ ವಾರೆಂಟ್ ಹೊರ ಡಿಸಿದ್ದರಿಂದ ಈಚೆಗೆ ರಾಬರಿ ಮಾಡಿಸಿದ್ದ ಪ್ರಕರಣದಲ್ಲಿ ಈತ ಪ್ರಾತ ಪ್ರಮುಖವಾಗಿದೆ. ಅಲ್ಲದೆ ಈ ಮುಂಚೆ ಹಲವಾರು ಕಡೆಗಳಲ್ಲಿ ನಡೆದ ದರೋಡೆ, ಕೊಲೆಗೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಇನ್ನಿತರ ಪ್ರಕರಣಗಳಲ್ಲಿ ಮಾರ್ಕೆಟ್ ಸತ್ಯಾ ಶಾಮೀ ಲಾಗಿದ್ದರಿಂದ ಆತನ ವಿರುದ್ದ ಪ್ರಕರಣಗಳು ದಾಖಲಾಗಿದ್ದವು. ಈ ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

LEAVE A REPLY

Please enter your comment!
Please enter your name here