ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಬದಲು ಪುನಾರಚನೆ ಮಾಡುವುದು ಸೂಕ್ತವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ವಿ ಗುತ್ತೇದಾರ ಹೇಳಿದರು.
ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆಯಾದರೆ ಎಲ್ಲರಿಗೂ ಅವಕಾಶ ದೊರೆಯುತ್ತದೆ. ಈಗಾಗಲೇ ಸಚಿವರಾದವರು ಹೊಸಬರಿಗೆ ಸಚಿವರಾಗಲು ಸಹಕರಿಸಬೇಕೆಂದರು.
ಸರ್ಕಾರ ರಚನೆಯಾಗುವಲ್ಲಿ ಹಲವರ ತ್ಯಾಗ, ಶ್ರಮ ಅಡಗಿದೆ. ಹೀಗಾಗಿ ಪಕ್ಷಕ್ಕೆ ಬಂದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸ ಬೇಕಿದೆ. ಜತೆಗೆ ಪಕ್ಷ ಕ್ಕಾಗಿ ದುಡಿದವರಿಗೂ ಗುರುತಿಸಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಬದಲು ಪುನಾರಚನೆಯಾ ಗಬೇಕೆಂ ದರು.
ಒಬ್ಬೊಬ್ಬ ಸಚಿವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಇರುವುದರಿಂದ ಜತೆಗೇ ಕೊರೊನಾದಂತಹ ಸಂಕಷ್ಟ ಸ್ಥಿತಿ ಇರುವುದರಿಂದ ಆಡಳಿತ ಇನ್ನಷ್ಟು ಚುರುಕು ಗೊಳ್ಳಬೇಕಿದೆ. ಹೀಗಾಗಿ ಕಲಬುರಗಿ ಸೇರಿ ಇತರ ಜಿಲ್ಲೆಗಳಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೊಂದಿರುವುದನ್ನು ಬಿಡುಗಡೆ ಗೊಳ್ಳುವುದು ಸಹ ಸೂಕ್ತವಾಗಿದೆ ಎಂದು ಇದೇ ಸಂದರ್ಭದಲ್ಲಿ ಗುತ್ತೇದಾರ ಹೇಳಿ ದರು.
ನನಗಂತು ಮಂತ್ರಿಯಾಗುವ ಆಸೆಯಿಲ್ಲ. ಭೀಕ್ಷೆ ಬೇಡಲ್ಲ. ಕೊಟ್ಟಿದ್ದನ್ನು ಪಡೆಯುವೆ. ಪಕ್ಷದ ಕಾರ್ಯಕರ್ತರನ್ನು ಗುರುತಿಸುವ ಪಕ್ಷ ಬಿಜೆಪಿಯದ್ದಾಗಿದೆ ಎಂದರು.
ಕೊರೊನಾ ದಾಳಿಯಿಂದ ಸಾವಿನ ಬಾಗಿಲಿಗೆ ಹೋಗಿ ಬರಲಾಗಿದೆ. ನಾಲ್ಕೈದು ದಿನ ಪುನರ್ಜನ್ಮದ ಅನುಭವವಾಯಿತು. ಈಗ ಸ್ವಲ್ಪ ಆರಾಮವಾಗಿದೆ ಎಂದು ಅನು ಭವಗಳನ್ನು ಮಾಲೀಕಯ್ಯ ವಿ. ಗುತ್ತೇದಾರ ಹಂಚಿಕೊAಡರು.