ಆಸಿಫ್ ಗಂಜ್ ರಸ್ತೆ ಸಂಚಾರ ನರಕ ಯಾತನೆ

0
995

ಕಲಬುರಗಿ, ನ. 13: ನಗರದಲ್ಲಿ ರಸ್ತೆ ಸಂಚಾರಕ್ಕೆ ವಾಹನಗಳಿಗೆ ರಸ್ತೆಗಳಿಲ್ಲ, ಇದರಲ್ಲಿ ಪಾದಚಾರಿಗಳು ಕೂಡಾ ರಸ್ತೆಯಲ್ಲಿಯೇ ನಡೆಯಬೇಕು ಇದು ನಮ್ಮ ಕಲಬುರಗಿ ನಗರದ ಮಧ್ಯದಲ್ಲಿರುವ ಮಹಿಬಸ್ ಮಸೀದಿ ಹಿಡಿದು ಆಸಿಫ್ ಗಂಜ್ ಮೂಲಕ ಸರಾಫ ಬಜಾರ ಗೆ ಹೋಗುವ ಮಾರ್ಗ ಇಲ್ಲಿ ದ್ವೀಚಕ್ರವಾಹನ ಓಡಿಸಲು ಸ್ಥಳ ಸಿಗುವದು ತುಂಬಾ ಕಷ್ಟ. ಹಿನ್ನೆಲೆ ರಸ್ತೆ ಪೂರ್ತಿಯಾಗಿ ಬಂಡಿಗಳ ಹಾವಳಿಯೇ ಹೆಚ್ಚಾಗಿದೆ.
ಅವರನ್ನು ಪ್ರಶ್ನಿಸಿದರೆ ಅವರು ಮಹಾನಗರಪಾಲಿಕೆಯುವರು ನೀಡಿರುವ ಬೀದಿ ವ್ಯಾ ಪಾರಿಗಳ ಲೈಸೆನ್ಸ್ ತೋರಿಸುವರು, ಪೋಲಿಸರಿಗೆ ಕೇಳಿದರೆ ಅದು ನಮಗೆ ಸಂಬAಧವಿಲ್ಲ, ಅದೇನಾದರೂ ಕೇಳುವುದಾರೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ.
ಮಹಾನಗರಪಾಲಿಕೆಯವರು ಲೈಸೆನ್ಸ್ ನೀಡಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರಕ್ಕಾಗಿ, ಆದರೆ ಇವರು ಮಾಡುತ್ತಿರುವುದು ರಸ್ತೆಯಲ್ಲಿಯೇ ಹಾಗಾದರೆ ಇದಕ್ಕೆ ಯಾರು ಹೊಣೆ.
ಇಲ್ಲಿ ಶಾಸಕರುಗಳು ಅಂತೂ ನಿದ್ರೆಯಲ್ಲಿದ್ದಾರೂ, ಅಥವಾ ತಮ್ಮ ಓಟಿಗಾಗಿ ಅನುಕಂಪ ತೋರಿಸುತ್ತಿದ್ದಾರೋ ಗೋತ್ತಿಲ್ಲ.
ಒಟ್ಟಿನಲ್ಲಿ ಸಾರ್ವಜನಿಕರು, ವಾಹನ ಚಾಲಕರು ಕಷ್ಟ ಮಾತ್ರ ಅನುಭವಿಸುತ್ತಿರುವುದು ಸತ್ಯವಾಗಿದೆ.
ಮಹಾನಗರಪಾಲಿಕೆಯ ಪೌರ ಕಾರ್ಮಿಕರಿಗೂ ಕಿರಿಕಿರಿ:
ಈ ರಸ್ತೆಯಲ್ಲಿ ಬೆಳಿಗ್ಗೆ ನೋಡಿದರೆ ರಾಶಿ ರಾಶಿ ಕಸ, ಅದರಲ್ಲೂ ಸರಕಾರ ನಿಷೇಧಿಸಿದ ಪ್ಲಾಸ್ಟಿಕ್, ಕಸ ತೆಗೆಯಲು ಇದಕ್ಕೆ ಮೂರರಿಂದ ನಾಲ್ಕು ಜನ ಪೌರ ಕಾರ್ಮಿಕರು ಬೇಕು, ಅದರಲ್ಲೂ ಕಸ ಚೆನ್ನಾಗಿ ತೆಗೆದಿಲ್ಲ ಎಂದು ಅಂಗಡಿಯವರ ರೋಪು ಯಾರೂ ಬೇಕಾದರೂ ನೋಡಬಹುದು.
ಇದಕ್ಕೆ ಯಾರು ಹೊಣೆ; ಸಂಚಾರಿ ಪಿಐ ಅವರನ್ನು ಕೇಳಿದರೆ ಇದು ನಮಗೆ ಬರುವು ದಿಲ್ಲ, ಅದು ಅವರಿಗೆ ಬರುತ್ತದೆ, ಅವರಿಗೆ ಕೇಳಿದರೆ ನಮ್ಮ ಹತ್ತಿರ ಸಿಬ್ಬಂದಿಗಳಿಲ್ಲ, ಮಹಾ ನಗರಪಾಲಿಕೆಯವರಿಗೆ ಕೇಳಿ ಅಂತ. ಅಂದರೆ ಇದು ನಡೆದಾದರೂ ಏನು? ಪೋಲಿಸ್ ಇಲಾಖೆ ಜವಾಬ್ದಾರಿಯೋ? ಮಹಾನಗರಪಾಲಿಕೆ ಜವಾಬ್ದಾರಿಯೋ? ಅಥವಾ ಪಾದಚಾರಿಗಳೆ ಜವಾಬ್ದಾರಿಯೋ?

LEAVE A REPLY

Please enter your comment!
Please enter your name here