ಉಪಚುನಾವಣೆ: ಬಿಜೆಪಿ 41 ಸ್ಥಾನಗಳಲ್ಲಿ ಗೆಲುವು

0
869

ನವದೆಹಲಿ, ನ. 11: 11 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಏಳು ರಾಜ್ಯಗಳಲ್ಲಿ ಫಲಿತಾಂಶ ಏರಿಳಿತವಾಗಿದ್ದು, ಒಟ್ಟು 59 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 41 ಸ್ಥಾನ ಕಬಳಿಸುವುದರೊಂದಿಗೆ ಕಾಂಗ್ರೆಸ್‌ನ 31 ಸ್ಥಾನಗಳನ್ನು ಕಸಿದುಕೊಂಡಿದೆ.
ಮಧ್ಯ ಪ್ರದೇಶದಲ್ಲಿ ಒಟ್ಟು 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನ ಗೆಲ್ಲುವುದರೊಂದಿಗೆ ಇಲ್ಲಿ ಕಾಂಗ್ರೆಸ್ ಪಕ್ಷದ 18 ಸ್ಥಾನಗಳನ್ನು ಕಸಿದುಕೊಂಡಿದ್ದು, ಕಾಂಗ್ರೆಸ್ ಇಲ್ಲಿ ಕೇವಲ 9 ಸ್ಥಾನಗಳಲ್ಲಿ ಜಯಗಳಿಸಿದೆ.
ಗುಜರಾತ್‌ನಲ್ಲಿಯೂ ಕೂಡಾ ಇದೇ ಪರಿಸ್ಥಿತಿಯಿದ್ದು, ಇಲ್ಲಿ ಕಾಂಗ್ರೆಸ್‌ನ 8 ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಇಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಿರುವ ಉತ್ತರ ಪ್ರದೇಶದಲ್ಲಿಯೂ ಬಿಜೆಪಿ 7 ಸ್ಥಾನಗಳ ಪೈಕಿ 6ರಲ್ಲಿ ಜಯಗಳಿಸಿದ್ದು, ಒಂದು ಸ್ಥಾನಕ್ಕೆ ಎಸ್‌ಪಿ ತನ್ನದಾಗಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್ ಸೋನ್ನೆ ಸಾಧನೆ.
ಮಣಿಪುರದಲ್ಲಿ 5 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 4 ಮತ್ತು ಪಕ್ಷೇತರ ಒಂದು ಸ್ಥಾನಗಳಿಸಿದ್ದು, ಕಾಂಗ್ರೆಸ್ ಝೀರೋ ಆಗಿದೆ. ಕರ್ನಾಟಕ ಮತ್ತು ಒಡಿಸ್ಸಾ ರಾಜ್ಯಗಳ ಎರೆಡೆರದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿಯೂ ಕೂಡಾ ಬಿಜೆಪಿ 3 ಸ್ಥಾನಗಳನ್ನು 2 ಕರ್ನಾಟಕ, ಒಂದು ಸ್ಥಾನ ಒಡಿಸ್ಸಾದಲ್ಲಿ ಬಿಜು ಜನತಾ ದಳ ಪಡೆದುಕೊಂಡಿದೆ. ಒಡಿಸಾದಲ್ಲಿ ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ.
ತೆಲAಗಾಣದಲ್ಲಿ ಬಿಜೆಪಿ ಉಪ ಚುನಾವಣೆಯಲ್ಲಿ ಟಿಎಸ್‌ಆರ್‌ನ ಹೊಂದಿದ್ದ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಹಿರಯಾಣ ವiತ್ತು ಛತ್ತಿಸಘಡಗಳಲ್ಲಿ ತಲಾ ಒಂದು ಸ್ಥಾನಗಳಲ್ಲಿ ಕಾಂಗೈ ಗೆಲುವು ಸಾಧಿಸಿದ್ದು, ಛತ್ತಿಸಘಡದಲ್ಲಿ ಜೆಸಿಸಿಐ ಹೊಂದಿದ್ದ ಒಂದು ಸ್ಥಾನವನ್ನು ಕಾಂಗೈ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇನ್ನು ಕರ್ನಾಟಕದಲಿ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದು, ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ ಒಂದೊAದು ಸ್ಥಾನ ಕಳೆದಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಮ್ಯಾಜಿಕ್‌ನಿಂದಾಗಿ ಬಿಹಾರದಲ್ಲಿ ಎನ್‌ಡಿಎ ಅಧಿಕಾರದ ಗದ್ದುಗೆ ಏರಲಿದ್ದು, ಇಲ್ಲಿ ಬಿಜೆಪಿ ಕಳೆದ ಬಾರಿಯ ವಿಧಾಣಸಭೆ ಚುನಾವಣೆಯಲ್ಲಿ ಹೊಂದಿದ 51 ಸ್ಥಾನಗಳನ್ನು ಈ ಬಾರಿ 2020ರಲ್ಲಿ ಅದನ್ನು 74 ಏರಿಸಿಕೊಂಡಿದೆ. 243 ವಿಧಾನಸಭಾ ಬಲದ ಬಿಹಾರದಲ್ಲಿ ಬಿಜೆಪಿ ಸಾರಥ್ಯದ ಎನ್‌ಡಿಎ 125 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಗದ್ದುಗೆ ಏರಲಿದ್ದಾರೆ.
ಆರ್‌ಜೆಡಿ 75 ಸ್ಥಾನಗಳನ್ನು ಹೊಂದಿದ್ದು, ಅದರ ಮಿತರ್ ಪಕ್ಷ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಹಾಗೂ ಸಿಪಿಐ, ಸಿಪಿಐ (ಎಂ) 16 ಸ್ಥಾನಗಳನ್ನು ಗೆದ್ದು ಒಟ್ಟು 110 ಸ್ಥಾನಗಳನ್ನು ಮಾತ್ರ ಗಳಿಸಿವೆ. ಇಲ್ಲಿ ಎಐಐಎಂಐಎA 5 ಸ್ಥಾನಗಳನ್ನು ಮತ್ತು ಬಿಎಸ್‌ಪಿ, ಎಲ್‌ಎಸ್ಪಿ ಮತ್ತು ಪಕ್ಷೇತರರು ತಲಾ ಒಂದೊAದು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ದೀಪಾವಳಿ ಪೂರ್ವದ ಪ್ರದರ್ಶನದ ಈ ಕ್ರ‍್ಯಾಕರ್‌ನಲ್ಲಿ ಮಧ್ಯಪ್ರದೇಶ ಮತ್ತು ಗುಜರಾತ್ ದೊಡ್ಡ ಅಬ್ಬರವನ್ನು ಒದಗಿಸಿದವು, ಕೇಸರಿ ಪಕ್ಷವು ಈ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ನಿAದ 26 ಸ್ಥಾನಗಳನ್ನು ಪಡೆದುಕೊಂಡಿದೆ. ಗುಜರಾತ್‌ನಲ್ಲಿ, ಬಿಜೆಪಿಯ “ಡಬಲ್ ಎಂಜಿನ್” ಎಲ್ಲಾ ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಅನ್ನು ಉಗ್ರಾಣಗೊಳಿಸಿತು, ಇದರಲ್ಲಿ ಸೌರಾಷ್ಟ್ರದಲ್ಲಿ ಐದು ಮತ್ತು ಬುಡಕಟ್ಟು ಪ್ರಾಬಲ್ಯದ ಡ್ಯಾಂಗ್ ಕ್ಷೇತ್ರ ಸೇರಿವೆ.

LEAVE A REPLY

Please enter your comment!
Please enter your name here