ಬೆಂಗಳೂರು, ನ. 10: ಮಿನಿ ಸಮರವೆಂದೇ ಹೇಳಲಾಗಿರುವ ಬೆಂಗಳೂರಿನ ರಾಜ ರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಧೂಳಿಪಟವಾಗಿವೆ.
ಕಳೆದ ಬಾರಿ ಆರ್. ಆರ್. ನಗರ ಕಾಂಗೈ ಭದ್ರ ಕೋಟೆಯಾದರೆ ಶಿರಾ ಜೆಡಿಎಸ್ ಪ್ರಾಬಲ್ಯದ ಕೋಟೆಯಾಗಿದ್ದು, ಇಲ್ಲಿ ಉಭಯ ಪಕ್ಷಗಳ ಶಾಸಕರು ಆಯ್ಕೆ ಯಾಗಿದ್ದರು, ಶಿರಾದಲ್ಲಿ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರ ಸಾವನಿಂದ ಹಾಗೂ ಆರ್.ಆರ್. ನಗರದಲ್ಲಿ ಆಪರೇಶನ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ ಕಾಂಗೈ ಶಾಸಕ ಮುನಿರತ್ನ ಅವರಿಂದ ತೆರವಾದ ಸ್ಥಾನಗಳಿಗೆ ಇದೇ ತಿಂಗಳು 3ರಂದು ಮತದಾನ ನಡೆದಿತ್ತು.
ತೀವ್ರ ಜಿದ್ದಾಜಿದ್ದಿ ಕ್ಷೇತ್ರವಾಗಿ ಪರಿಣಮಿಸಿಸ ಆರ್ ಆರ್. ನಗರ ಚುನಾವಣೆಯಲ್ಲಿ ಕಾಂಗೈ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಮೆರಗು ಇಲ್ಲಿ ಠುಸ್ ಆಗಿದ್ದು, ಮತ್ತೇ ರಾಜ್ಯದಲ್ಲಿ ಜನ ಬಿಜೆಪಿಯತ್ತ ವಾಲಿದ್ದು, ಪ್ರತಿಪಕ್ಷಗಳಿಗೆ ತೀವ್ರ ಮುಖಭಂಗವಾ ಗಿದಂತಾಗಿದೆ.
ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಇಂದಿನ ಗೆಲವಿನಿಂದಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈ ಬಾರಿ ಅವರು ಕಾಂಗೈಸ್ ಅಭ್ಯರ್ಥಿ ಕುಸಮಾ ಅವರನ್ನು 54 ಸಾವಿರ ಅಧಿಕ ಮತಗಳ ಅಂತರದಿAದ ಸೋಲಿಸಿ ಜಯಗಳಿಸಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲವೆಂಬAತಾಗಿದೆ.
ಶಿರಾದಲ್ಲಿ ಕಳೆದ ಬಾರಿ ಜೆಡಿಎಸ್ ತನ್ನ ಭದ್ರಕೋಟೆಯನ್ನಾಗಿಸಿತ್ತು, ಆದರೆ ಈ ಬಾರಿ ಮಹಿಳೆಯೊಬ್ಬಳನ್ನು ಕಣಕ್ಕೆ ತಂದು ಅನುಕಂಪದ ಅಲೆ ಸೃಷ್ಟಿಸುವಲ್ಲಿ ಜೆಡಿಸ್ ವಿಫಲವಾಗಿದ್ದು, ಇಲ್ಲಿ ಕಳೆದ 13 ವರ್ಷಗಳಿಂದ ಬಿಜೆಪಿ ಸತತ ಸೋಲು ಕಾಣುತ್ತಲೇ ಬಂದಿದ್ದು, ಕೊನೆಯಲ್ಲಿ ರಾಜೇಶಗೌಡ ಅವರ ಗೆಲುವು ಈ ಕ್ಷೇತ್ರಕ್ಕೆ ಬಿಜೆಪಿ ಎಂಟ್ರಿ ಕೊಟ್ಟು ಗೆಲುವು ಸಾಧಿಸಿದ್ದು, 14 ವರ್ಷಗಳ ವನವಾಕ್ಕೆ ನಾಂದಿ ಹಾಡಿದೆ.
ಶಿರಾ ವಿಧಾನಸಭೆ 2018ರ ವಿಧಾನಸಭೆ ಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಸತ್ಯನಾರಾಯಣ ಅವರು ಶೇ. 41.24 ಪ್ರತಿಶತ ಮತಗಳೊಂದಿಗೆ ಒಟ್ಟು 74338 ಓಟ್‌ಗಳನ್ನು ಪಡೆದು ಆಯ್ಕೆಗೊಂಡಿದ್ದು, ಇಲ್ಲಿ ಎರಡನೇ ಸ್ಥಾನದಲ್ಲಿ ಕಾಂಗೈ ಅಭ್ಯರ್ಥಿ ಟಿ. ಬಿ. ಜಯಚಂದ್ರ ಅವರುಶೇ. 35.49 ಪ್ರತಿಶತಗಳೊಂದಿಗೆ 63970 ಮತಗಳು ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಸಿ.ಎಂ. ರಾಜೇಶಗೌಡ ಅವರು ಕೇವಲ 9.41 ಪ್ರತಿಶತ ಮತ ಅಂದರೆ 16750 ಮತಗಳನ್ನು ಮಾತ್ರ ಪಡೆದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಡಾ. ಸಿ.ಎಂ. ರಾಜೇಶಗೌಡ ಅವರು ಶೇ. 41.5ರಷ್ಟು ಮತಗಳಿಸಿದ್ದು ಜಯಗಳಿಸಿದ್ದಾರೆ. ಇಲ್ಲಿ ಕಳೆದ ಬಾರಿ ಜಯಗಳಿಸಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ರಾಜ ರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರು 1 ಲಕ್ಷ 25 ಸಾವಿರಕ್ಕೂ ಅಧಿಕ ಮತಪಡೆಯುವದರೊಂದಿಗೆ ಕಾಂಗೈ ಅಭ್ಯರ್ಥಿ ಕುಸಮಾ ಅವರನ್ನು ಸುಮಾರು 54 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ, ಜಯಭೇರಿ ಬಾರಿಸಿದ್ದಾರೆ.