ಮುಂದಿನ ದಿನಗಳಲ್ಲಿ ಪತ್ರಕರ್ತರಿಗಾಗಿ ಆರೋಗ್ಯ ತಪಾಸಣಾ ಶಿಬಿರ: ಡಾ. ಪಿ. ರಾಜಾ

0
1265

ಕಲಬುರಗಿ, ನ. 4: ಪತ್ರಕರ್ತರಿಗಾಗಿ ಉಚಿತ ಕಣ್ಣಿನ ತಪಾಸಣೆ, ಶಸ್ತçಚಿಕಿತ್ಸಾ ಶಿಬಿರ ಏರ್ಪಿಡಿಸಿರುವುದು ತುಂಬಾ ಶ್ಲಾಘನೀಯ ಕಾರ್ಯವಾಗಿದೆ, ಪತ್ರಕರ್ತರು ಬಿಡುವಿಲ್ಲದೇ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳುವಲ್ಲಿ ತುಂಬಾ ಕಷ್ಟಕರವಾಗುತ್ತದೆ, ಈ ದೃಷ್ಟಿಯಿಂದ ಅವರಿಗಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇಂತಹ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ, ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಪಿ. ರಾಜಾ ಅವರು ಹೇಳಿದ್ದಾರೆ.
ಅವರಿಂದು ಪತ್ರಕರ್ತರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬರದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ, ಈ ಶಿಬಿರದಲ್ಲಿ ಪತ್ರಕರ್ತರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಜೊತೆಗೆ ಉಚಿತವಾಗಿ ಕನ್ನಡ ವಿತರಣೆ ಮತ್ತು ಶಸ್ತç ಚಿಕಿತ್ಸೆಯಂತಹ ಕಾರ್ಯ ಮಾಡುತ್ತಿರುವ ದೃಷ್ಟಿ ಆಸ್ಪತ್ರೆಯವರನ್ನು ಅಭನಂದಿಸಿ, ಪತ್ರಕರ್ತರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ದೃಷ್ಟಿ ಆಸ್ಪತ್ರೆಯ ವೈದ್ಯರಾದ ಡಾ. ನಿವೇದಿತಾ ರೆಡ್ಡಿ, ಆಸ್ಪತ್ರೆಯ ವ್ಯವಸ್ಥಾಪಕರಾದ ಪ್ರಕಾಶ ಡಿಕೆ ಅವರುಗಳು ವೇದಿಕೆಯ ಮೇಲೆ ಉಪಸ್ಥತಿರಿದ್ದರು. ಕಾರ್ಯನಿರತÀ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಅವರು ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ನಿರೂಪಣೆಯನ್ನು ಟಿವಿ 18 ವರದಿಗಾರರಾದ ಡಾ. ಶಿವರಾಮ ಅಸುಂಡಿ ಅಚ್ಚುಕಟ್ಟಾಗಿ ನೆರವೇರಿಸಿದ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಸಂಘದ ಪ್ರದಾನ ಕಾರ್ಯ ದರ್ಶಿ ದೇವೇಂದ್ರಪ್ಪ ಅವಂಟಿ ಮಾತನಾಡಿದರು.
200 ಜನರ ಕಣ್ಣು ಪರೀಕ್ಷೆ
ದೃಷ್ಠಿ ಆಸ್ಪತ್ರೆಯವರಿಂದ ಇಂದು ಆಯೋಜಿಸಲಾಗಿದ್ದ ಉಚಿತವಾಗಿ ಸುಮಾರು 200 ಜನ ಪತ್ರಕರ್ತರ ಕಣ್ಣುಗಳನ್ನು ಪರೀಕ್ಷಿಸಲಾಗಿ, ಅದರಲ್ಲಿ ಸುಮಾರು ಜನರಿಗೆ ಕಣ್ಣಿನ ದೃಷ್ಟಿ ದೋಷವಿದ್ದ ಹಿನ್ನೆಲೆಯಲ್ಲಿ ಉಚಿತವಾಗಿ ಕನ್ನಡಕವನ್ನು ಆಸ್ಪತ್ರೆಯಿಂದ ನೀಡಲಾಗುವುದು ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಅಲ್ಲದೇ ಕೆಲವೊಂದು ಪತ್ರಕರ್ತರಿಗೆ ಕಣ್ಣಿನ ಪೊರೆ ಮತ್ತು ಇತರ ತೊಂದರೆಗಳನ್ನು ನಿವಾರಿಸಲು ಶಸ್ತçಚಿಕಿತ್ಸೆಯೂ ಕೂಡಾ ಮಾಡಲಾಗುವುದು ಎಂದು ಹೇಳಿದರು.
ಬಿಪಿ, ಶುಗರ್ ತಪಾಸಣೆ
ಪತ್ರಿಕಾ ಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಸುಮಾರು 200 ಜನರಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ಸಹ ಮಾಡಲಾಗಿಯಿತು.

LEAVE A REPLY

Please enter your comment!
Please enter your name here