ನವೆಂಬರ್ 8ರಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಸಮಾರಂಭ

0
1203

ಕಲಬುರಗಿ, ನ. 4: 65ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಪ್ರತಿ ವರ್ಷ ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಭಾರೀ ವಿಜ್ರಂಭಣೆಯಿAದ ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ವಿಶ್ವದಾದ್ಯಂತ ವಕ್ಕರಿಸಿದ ಮಹಾಮಾರಿ ಕೊರೊನಾ ಸೋಂಕಿನಿAದಾಗಿ ಸರಕಾರದ ಹೊರಡಿಸಿದ ಮಾರ್ಗಸೂಚಿನ್ವಯ ಈ ಬಾರಿ ಅತ್ಯಂತ ಸರಳ ರೀತಿಯಿಂದ ಸಾಮಾಜಿಕ ಅಂತರದೊAದಿಗೆ ನವೆಂಬರ್ 8ರಂದು ಆಚರಿಸಲಾಗುವುದು ಎಂದು ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸಚೀನ್ ಪರತಾಬಾದ ಅವರು ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ನವೆಂಬರ್ 8ರಂದು ಬೆಳಿಗ್ಗೆ 11.45ಕ್ಕೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಹತ್ತಿರದಲ್ಲಿರುವ ಕನ್ನಡ ಭವನದಲ್ಲಿ ಕಾಮರೇಡ್ ದಿ. ಮಾರುತಿ ಮಾನ್ಪಡೆ ಅವರ ವೇದಿಕೆಯಡಿಯಲ್ಲಿ ಆಚರಿಸಲಾಗುವುದು.
ಈ ರಾಜ್ಯೋತ್ಸವ ಸಮಾರಂಭದಲ್ಲಿ ಈ ಬಾರಿ ಕರೋನಾ ವಾರಿಯರ್ಸಗಳಾದ ವೈದ್ಯರು, ನರ್ಸಗಳು (ದಾದಿಯರು), ಪೋಲಿಸ್ ಇಲಾಖೆ ಅಧಿಕಾರಿಗಳು, ಪತ್ರಕರ್ತರು, ಸಮಾಜಕ ಸೇವಕರು, ನಿವೃತ್ತ ಅಧಿಕಾರಿಗಳಿಗೆ ಸನ್ಮಾನಿಸಿ, ಪುರಸ್ಕರಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಶ್ರೀ ಕಂಬಳೇಶ್ವರ ಸಂಸ್ಥಾನಮಠ, ಪರಮ ಪೂಜ್ಯ ಷ. ಬ್ರ. ಶ್ರೀ ಸೋಮಶೇಖರ ಶಿವಾಚಾರ್ಯರು ಹಾಗೂ ಹಳ್ಳಿಖೇಡ (ಬಿ) ಸೈಯದ ದಾನಿಶ ಖಾದ್ರಿ ಶಿರೆ ಸಾಹೇಬ ಅವರು ವಹಿಸಿಕೊಳ್ಳಲಿದ್ದಾರೆ.
ಉದ್ಭಾಟಕರಾಗಿ ಕೆಕೆಆರ್‌ಡಿಬಿಯ ಅಧ್ಯಕ್ಷರೂ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇ ವೂರ ಆಗಮಿಸಲಿದ್ದಾರೆ.
ಪುರಸ್ಕೃತರಿಗೆ ಕಲಬುರಗಿ ಸಂಸದರಾದ ಡಾ. ಉಮೇಶ ಜಾಧವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಭೂವನೇಶ್ವರಿ À ಭಾವ ಚಿತ್ರಕ್ಕೆ ಪೂಜೆಂiÀiನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ ನೂರ ಅವರು ಸಲ್ಲಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜಕೀಯ ನಾಯ ಕರು, ಪತ್ರಕರ್ತರು, ಅಧಿಕಾರಿಗಳು, ಸಮಾಜ ಸೇವಕರುಗಳು ಆಗಮಿಸಲಿದ್ದಾರೆ ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ನಗರ ಅಧ್ಯಕ್ಷ ರಾದ ರಾಹುಲ್ ಪರತಾಬಾದ ಮತ್ತು ಸುರೇಶ ಹೃನಗುಂಡಿ ಅವರುಗಳು ಜಂಟಿಯಾಗಿ ತಿಳಿಸಿ ದ್ದಾರೆ.

LEAVE A REPLY

Please enter your comment!
Please enter your name here