ಕಲಬುರಗಿ, ನ. 4: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸರಕಾರ ಇಂದು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬಿಜೆಪಿ ಹಿರಿಯ ಧುರೀಣ ದಯಾಘÀÀನ ಪ್ರಹ್ಲಾದ ಧಾರವಾಡಕರ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಕಾಗಿ ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರದ ನಗರಾಭಿವೃದ್ಧಿ ಇಲಾಖೆಯ ಆಧಿನ ಕಾರ್ಯದರ್ಶಿ ಸಿ.ಎಸ್. ಶಿವಕುಮಾರಸ್ವಾಮಿಯವರು ಆದೇಶ ಹೊರಡಿಸಿದ್ದಾರೆ.
ಈ ಮುಂಚೆ 2008 ರಿಂದ 2010ರ ಅವಧಿಯ 2 ವರ್ಷಗಳ ಕಾಲ ಅವರು ಜಿಡಿಎ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಈ ಅವಧಿಯಲ್ಲಿಯೂ ಕೂಡಾ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದರು.
ಈಗ ಎರಡನೇ ಬಾರಿಗೆ ಮತ್ತೇ ಜಿಡಿಎ ಅಧ್ಯಕ್ಷರಾಗಿ ಬಿಎಸ್ವೆöÊ ಸಿಎಮ್ ಆಗಿರುವ ಅವಧಿಯಲ್ಲಿಯೇ ನೇಮಕಗೊಂಡಿರುವುದು ನೋಡಿದರೆ ಸಿಎಂ ಅವರಿಗೆ ಎಷ್ಟು ಪ್ರೀಯರು ಎಂಬುದು ಸಾಬೀತಾಗುತ್ತದೆ.