ಬಂಜಾರ ಸಮಾಜದ ಸಂತ ರಾಮರಾವ್ ಮಹಾರಾಜ್ ಇನ್ನಿಲ್ಲ

0
1210

ಮುಂಬೈ, ಅ. 31: ಬಂಜಾರ ಸಮಾಜದ ಉನ್ನತ ಧಾರ್ಮಿಕ ಮುಖಂಡ ರಾಮರಾಜ್ ಮಹಾರಾಜ್ ಅವರು ನಿನ್ನೆ ರಾತ್ರಿ ನಿಧನರಾದರು.
ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸಂತ ರಾಮರಾವ್ ಮಹಾರಾಜ್ ಅವರಿಗೆ 89 ವರ್ಷ. ವಯಸ್ಸಿಗೆ ಸಂಬAಧಿಸಿದ ಸಮಸ್ಯೆಗಳಿಂದಾಗಿ ಸಂತ ರಾಮರಾವ್ ಮಹಾರಾಜ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ರಾಮರಾಜ್ ಮಹಾರಾಜ್ ಅವರು ದೇಶಾದ್ಯಂತ ಬಂಜಾರ ಸಮಾಜದ ಪ್ರಮುಖ ಸಂತರಾಗಿದ್ದರು. ಮಹಾರಾಜರಿಗೆ ದೇಶಾದ್ಯಂತ 12 ಕೋಟಿಗೂ ಅಧಿಕ ಅನುಯಾ ಯಿಗಳು ಇದ್ದರು.
ಪೊಹ್ರಾದೇವಿ ದೇಗುಲದಲ್ಲಿ ಅಂತ್ಯಕ್ರಿಯೆ
ಮಹಾರಾಜರ ಭಕ್ತರ ಪ್ರಕಾರ, ಅವರನ್ನು ಬಂಜಾರ ಸಮಾಜದ ಕಾಶಿ ಎಂದು ಪರಿಗಣಿಸಲಾಗಿರುವ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹ್ರಾದೇವಿ ದೇಗುಲದಲ್ಲಿ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
ಮಹಾರಾಜರಿಂದ ಆಶೀರ್ವಾದ ಪಿಎಂ ಮೋದಿ
ಸಂತ ರಾಮರಾವ್ ಮಹಾರಾಜ್ ನಿಸ್ಸಂದೇಹವಾಗಿ ಬಂಜಾರ ಸಮಾಜದ 12 ಕೋಟಿ ಜನರ ಉನ್ನತ ಧಾರ್ಮಿಕ ಮುಖಂಡರಾಗಿದ್ದರು. ಅದಕ್ಕಾಗಿಯೇ ಅವರು ರಾಜಕೀಯ ವಲಯಗಳಲ್ಲೂ ಪ್ರಭಾವ ಬೀರಿದರು. ಅವರು ಎಂದಿಗೂ ರಾಜಕೀಯದೊಂದಿಗೆ ನೇರವಾಗಿ ಸಂಪರ್ಕ ಹೊಂದಿಲ್ಲವಾದರೂ, ಉನ್ನತ ರಾಜಕಾರಣಿಗಳು ಮಾತ್ರ ಅವರಿಂದ ದೂರವಿರುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಂತಹ ನಾಯಕರು ಸಹ ಸಂತ ರಾಮರಾವ್ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದಾರೆ.
ಶೋಕ :
ಬಂಜಾರ ಸಮಾಜದ ಉನ್ನತ ಹಾಗೂ ಈ ಶತಮಾನದ ಮಹಾನ ಗುರು ರಾಮರಾವ ಮಹಾರಾಜರನ್ನು ಇಂದು ನಮ್ಮ ಸಮಾಜ ಕಳೆದುಕೊಂಡಿದೆ ಎಂದು ಬಿಜೆಪಿ ಮುಖಂಡ ವಾಲ್ಮೀಕ ನಾಯಕ ಅವರು ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ.
ರಾಮರಾವ ಮಹಾರಾಜರ ಭಕ್ತರು ಕರ್ನಾಟಕ, ಮಹಾರಾಷ್ಟç, ಆಂಧ್ರ ಪ್ರದೇಶ, ತೇಲಂಗಾಣ, ಗುಜರಾತ ಸೇರಿದಂತೆ ಇನ್ನು ಹಲವಾರು ರಾಜ್ಯಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೊಂದಿದ್ದು, ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟ ಆಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here