ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಪ್ರಶಸ್ತಿಗೆ ಹೈ.ಕ. ಭಾಗದ 7 ಜನ ಸಾಧಕರು ಆಯ್ಕೆ

0
1136

ಕಲಬುರಗಿ, ಅ. 28: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಪ್ರಕಟವಾಗಿದ್ದು ಹೈದ್ರಾಬಾದ ಕರ್ನಾಟಕಕ್ಕೆ ಜಿಲ್ಲೆಗೊಂದರAತೆ ಒಟ್ಟು 7 ರಾಜ್ಯೋತ್ಸವ ವಿವಿಧ ಕ್ಷೇತ್ರಗಳಿಗೆ ಸಾಧದನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕಲಬುರಗಿ ಜಿಲ್ಲೆಯಿಂದ ಕೃಷಿ ಕ್ಷೇತ್ರಕ್ಕೆ ನೀಡಿರುವ ಪ್ರಶಸ್ತಿಗೆ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಅವರಿಗೆ ಅವರ 74ನೇ ಇಳಿವಯಸ್ಸಿನಲ್ಲಾದರೂ ಅವರು ಮಾಡಿದ ಕೃಷಿ ಕ್ಷೇತ್ರದ ಸಾಧನೆಗೆ ಪ್ರಶಸ್ತಿ ನೀಡಲು ಸರಕಾರ ತಡಮಾಡಿಯಾದರೂ ಗುರುತಿಸಿದೆ.
ಈ ಹೈದ್ರಾಬಾದ ಕರ್ನಾಟಕದ ಬೀದರ ಜಿಲ್ಲೆಯಿಂದ ಕೃಷಿ ಕ್ಷೇತ್ರದ ಸಾಧನೆಗಾಗಿ ಸೂರತ್‌ಸಿಂಗ್ ಕನೂರಸಿಂಗ್ ಅವರಿಗೆ ಆಯ್ಕೆಮಾಡಲಾಗಿದ್ದು, ಯಾದಗಿರಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಡಿ. ಎನ್. ಅಕ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ರಾಯಚೂರು ಜಿಲ್ಲೆಗೆ ಸಂಗೀತ ಕ್ಷೇತ್ರದ ಸಾಧನೆಗಾಗಿ ಹಂಬಯ್ಯ ನೂಲಿ, ಸಂಘ, ಸಂಸ್ಥೆಗಳಿಗೆ ಕೊಡ ಮಾಡುವ ಪ್ರಶಸ್ತಿಯು ಈ ಬಾರಿ ಬಳ್ಳಾರಿ ಜಿಲ್ಲೆಯ ದೇವದಾಸಿ ಸ್ವಾಲಂಬನ ಕೇಂದ್ರಕ್ಕೆ ಹಾಗೂ ಇದೇ ಜಿಲ್ಲೆಗೆ ಮತ್ತೊಂದು ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಎ. ನಾಗರತ್ನ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಜಾನಪದ/ತೊಗಲುಗೊಂಬೆಯಾಟ ಕ್ಷೇತ್ರದಲ್ಲಿಯ ಸಾಧನೆಗಾಗಿ ಕೊಪ್ಪಳ ಜಿಲ್ಲೆಯ ಕೇಶಪ್ಪ ಶೀಳ್ಳೆಕ್ಯಾತರ ಅವರನ್ನು ಗುರುತಿಸಿ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.
2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆಗೈದ ಗಣ್ಯರಿಗೆ ಹಾಗೂ ಸಾಧಕರಿಗೆ ನೀಡಲು ಸರಕಾರ ಇಂದು ಆದೇಶ ಹೊರಡಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ, ಸಂಘ,ಸAಸ್ಥೆಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸತ್ಸಂಪ್ರದಾಯವನ್ನು ಸರಕಾರವು ಅನುಸರಿಸುತ್ತಾ ಬಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣ್ಯರಿಗೆ 2020ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರಕಾರವು ನಿರ್ಧರಿಸಿ ಇಂದು ಆದೇಶ ಹೊರಡಿಡಿದೆ.
ಈ ಪ್ರಶಸ್ತಿಗಳನ್ನು ನವೆಂಬರ್ 1ರಂದು ನಡೆಯಲಿರುವ ರಾಜ್ಯೋತ್ಸವ ದಿನದಂದು 65 ಜನ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಿ ಗೌರವಿಸಲಾಗುವುದು.

LEAVE A REPLY

Please enter your comment!
Please enter your name here