ಪೌರಕಾರ್ಮಿಕರ ಸೇವೆ ಖಾಯಂಯಾತಿಗಾಗಿ 19ರoದು ಭೀಮ್ ಆರ್ಮಿಯಿಂದ ಪ್ರತಿಭಟನೆ

0
1049

ಕಲಬುರಗಿ, ಅ. 18: ಕಳೆದ 26 ವರ್ಷಗಳಿಂದ ಅಂದರೆ 1994 ರಿಂದ ಇಲ್ಲಿಯವರೆಗೆ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಹೊರ ಗುತ್ತೀಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸುಮಾರು 477 ಪೌರ ಕಾರ್ಮಿಕರು ಬೀದಿಗೆ ಬಂದಿದ್ದು, ಇವರನ್ನು ಇಲ್ಲಿಯವರೆಗೆ ಖಾಯಂ ಆಗಿ ಸೇವೆಗೆ ತೆಗೆದುಕೊಳ್ಳದೆ ಸರಕಾರ ನಿರ್ಲಕ್ಷ ಧೋರಣೆ ತಾಳುತ್ತಿರುವುದ ಅಲ್ಲದೇ ಅವರನ್ನು ಕೂಡಲೇ ಖಾಯಂ ಮಾಡಬೇಕೆಂದು ಆಗ್ರಹಿಸಿ ಭೀಮ್ ಆರ್ಮಿ ನೇತೃತ್ವದಲ್ಲಿ ನಾಳೆ 19ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮ್ ಆರ್ಮಿಯ ರಾಜ್ಯ ಸಮಿತಿಯ ಅಧ್ಯಕ್ಷರಾದ ಎಸ್. ಎಸ್. ತವಡೆ ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ನಾಳೆ ಬೆಳಿಗ್ಗೆ 11.00ಗಂಟೆಗೆ ಪೌರ ಕಾರ್ಮಿಕರೊಂದಿಗೆ ಪ್ರತಿಭಟನಾ ಹೋರಾಟ ಹಮ್ಮಿಕೊಂಡಿದ್ದು, ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದರಿಂದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಜನಾಂಗದವರಿಗೆ ಆರ್ಥಿಕ ಸಮಸ್ಯೆಯಿಂದ ಬಳಲಿ, ಇವರು ದಾರಿ ಕಾಣದೇ ತಮ್ಮ ಹೊಟ್ಟೆಪಾಡಿಗಾಗಿ ಹಾಗೂ ಕುಟುಂಬ ನಿರ್ವಹಣೆಗೋಸ್ಕರ ಮಹಾನಗರಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಹೊರಗುತ್ತಿಗೆ ಆಧಾರದ ಮೇಲೆ ಗುತ್ತೀಗೆದಾರರ ಕೈಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರನ್ನು ಕೂಡಲೇ ಖಾಯಂಗೊಳಿಸಬೇಕೆAದು ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದರೂ ಕೂಡ ಸರಕಾರ ಇದಕ್ಕೆ ಕ್ಯಾರೇ ಅನ್ನದೇ ಖಾಯಂ ಮಾಡಲು ಕ್ರಮ ಕೈಗೊಳ್ಳದೇ ಇರುವುದು ದುರದ್ರುಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಭೀಮ್ ಆರ್ಮಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಶಿವಕುಮಾರ ಮುಡ್ಡಿ, ಭೀಮ್ ಆರ್ಮಿಯ ಜಿಲ್ಲಾ ಕಾರ್ಯದರ್ಶಿ ಸಂಜಯಕುಮಾರ ಶಹಾಬಾದ, ಭೀಮ್ ಆರ್ಮಿಯ ಜಿಲ್ಲಾ ಘಟಕದ ಯುವ ಅಧ್ಯಕ್ಷರಾದ ಸತೀÀಶ ಪರತಾಬಾದ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾದ ಶ್ರೀಮತಿ ಅನುಸೂಯಾಬಾಯಿ, ಅರ್ಜುನ ಸಿಂಗೆ, ರಾಕೇಶ ಅವರುಗಳು ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here