ಆಳಂದ, ಅ. 18: ಕಳೆದ ನಾಲ್ಕು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಹಾಗೂ ಅಮರ್ಜಾ ನದಿಯ ನೀರು ಅಪಾರ ಪ್ರಮಾಣದಲ್ಲಿ ಬಿಟ್ಟಿರುವುದರಿಂದ ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮವು ಪ್ರವಾಹದಿಂದ ತತ್ತರಿಸಿದೆ.
ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ಹಿತ್ತಲಶಿರೂರ ಗ್ರಾಮದ ಜನರಿಗೆ ಕುಡಿಯಲು ಯೋಗ್ಯವಾಗಿದ್ದ ಭಾವಿ ನೀರು ಸಂಪೂರ್ಣ ಹಾಳಾಗಿದೆ.ಭಾವಿಗೆ ಸಂಬAಧಿಸಿದ ಮೋಟರ್,ಪೈಪ್‌ಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ಗ್ರಾಮದ ಜನತೆಗೆ ಕುಡಿಯುವ ನೀರೆ ಇಲ್ಲದಂತಾಗಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಿತ್ತಲಶಿರೂರ ಗ್ರಾಮದ ಕ.ರ.ವೇ ಅಧ್ಯಕ್ಷ ಚಂದ್ರಕಾAತ ಅವಟೆ ಆಗ್ರಹಿಸಿದ್ದಾರೆ.
ಇದಲ್ಲದೆ ಅಮರ್ಜಾ ನದಿಯ ನೀರಿನ ರಭಸಕ್ಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತ ಕಂಗಾಲಾಗಿದ್ದಾನೆ. ಹೊಲದಲ್ಲಿದ್ದ ಸಂಪೂರ್ಣ ಮಣ್ಣು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.
ತೊಗರಿ,ಹತ್ತಿ,ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ಹೋಗಿವೆ ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ಘೋಷಣೆ ಮಾಡಬೇಕೆಂದು ಕ.ರ.ವೇ ರೈತ ಘಟಕ ಅಧ್ಯಕ್ಷ ಅಣ್ಣಾರಾವ ಪೋ.ಪಾಟೀಲ್ ಹಾಗೂ ಕಾರ್ಯದರ್ಶಿ ಕಲ್ಯಾಣಿ ಪೂಜಾರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Home Uncategorized ಅಮರ್ಜಾ ಪ್ರವಾಹಕ್ಕೆ ಹಿತ್ತಲಶಿರೂರ ತತ್ತರ. ಕುಡಿಯುವ ನೀರಿಗಾಗಿ ಪರದಾಟ. ರೈತನ ಬೆಳೆ ಸಂಪೂರ್ಣ ನಾಶ