ಅನ್‌ಲಾಕ್ 05: ಚಿತ್ರಮಂದಿರ ತೆರವಿಗೆ ಅವಕಾಶ ಇನ್ನು ಆರಂಭವಾಗದ ಚಿತ್ರ ಪ್ರದರ್ಶನಗಳು

0
736

ಲಬುರಗಿ, ಅ. 16: ವಿಶ್ವದೆಲ್ಲೇಡೆ ಈ ಶತಮಾನದ ಮಹಾಮಾರಿ ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ ಮಾರ್ಚ 21 ರಿಂದ ಮುಚ್ಚಲ್ಪಟ್ಟಿರುವ ಚಿತ್ರಮಂದಿರಗಳು ಮತ್ತ ಪುನಃ ಚಿತ್ರ ಪ್ರದರ್ಶನ ಆರಂಭಿಸಲು ಚಿತ್ರಮಂದಿರಗಳ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಕೇಂದ್ರ ಸರಕಾರ ಇತ್ತೀಚೆಗಷ್ಟೇ ಅಕ್ಟೋಬರ್ 15ರಿಂದ ಚಿತ್ರಮಂದಿರ ಸೇರಿದಂತ ಮನೋರಂಜನೆಗಳಿಗೆ ಅನ್‌ಲಾಕ್ 05ರಲ್ಲಿ ಗ್ರೀನ್ ಸಿಗ್ನ್ಲ್ ನೀಡಿತ್ತು, ಆದ್ಯಾಗೂ ಕಲಬುರಗಿ ನಗರ ಸೇರಿದಂತೆ ರಾಜ್ಯದ ಇತತೆಡೆ ಮಲ್ಟಿಫ್ಲೇಕ್ಸ್ಗಳು ಆರಂಭವಾಗಿಲ್ಲ.
ಸರಕಾರದ ಮಾರ್ಗಸೂಚಿಯನ್ವಯ ಶೇ. 50ರ ಸೀಟುಗಳು ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಜನರನ್ನು ಅವಕಾಶಿಸಬೇಕು. ಅಲ್ಲದೇ ಹಲವಾರು ಕೋವಿಡ್ ನಿಯಮಗಳನ್ವಯ ಚಿತ್ರಮಂದಿರಗಳು ಪುನಃರಾಂಭಕ್ಕೆ ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.
ಕಲಬುರಗಿ ನಗರದಲ್ಲಿ ಮೂರು ಮಲ್ಟಿಫ್ಲೇಕ್ಸ್ಗಳಿದ್ದು ಅವರು ಪುನರಾಂಭವಾಗಿಲ್ಲ.
ಬರುವ 23ರಿಂದ ಮಲ್ಟಿಫ್ಲೇಕ್ಸ್ಗಳನ್ನು ಹೊರತು ಪಡಿಸಿ ಉಳಿದ ಚಿತ್ರಮಂದಿಗಳು ಅಂದರೆ ಸಂಗಮ, ತ್ರಿವೇಣಿಗಳಲ್ಲಿ ಪ್ರದರ್ಶನ ಆರಂಭವಾಗಲಿದೆ.
ಅನ್‌ಲಾಕ್ 05ರ ಅನ್ವಯ ಕಂಟೈನ್‌ಮೆAಟ್ ವಲಯಗಳಲ್ಲಿ ಮನೋರಂಜನೆ ಸೇರಿ ಇನ್ನು ಯಾವುದೇ ಚಟುವಟಿಕಗಳು ಈ ತಿಂಗಳ 30ರ ವರೆಗೆ ಆರಂಭವಾಗುವAತಿಲ್ಲ ಎಂಬುದು ಕೇಂದ್ರದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಒಂದು ಸೀಟು ಬಿಟ್ಟು, ಒಂದು ಸೀಟು ಮಾತ್ರ ಟಿಕೆಟ್ ನೀಡಲು ನಿಯಮವಿದ್ದು, ಪ್ರತಿದಿನ ಚಿತ್ರಮಂದಿರ ಪೂರ್ತಿಯಾಗಿ ಸ್ಯಾನಿಟೈಸರ್ ಮಾಡಬೇಕು, ಪ್ಯಾಕ್ ಮಾಡಿದ ಆಹಾರ ಮಾತ್ರ ಚಿತ್ರಮಂದಿರದ ಕ್ಯಾಂಟಿನ್‌ಗಳಲ್ಲಿ ಮಾರಾಟಕ ಮಾಡಬಹುದು.
ಇನ್ನೆರಡು ದಿನಗಳಲ್ಲಿ ಮಲ್ಪಿಫ್ಲೇಕ್ಸ್ಗಳು ಪುನರಾಂಭಿಸಬಹುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here