ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜನರ ರಕ್ಷಣೆಗೆ ಎರಡು ಹೆಲಿಕ್ಯಾಪ್ಟರ್ ಬಳಕೆ : ಬಿ.ಎಸ್.ವೈ.

0
840

ಬೆಂಗಳೂರು, ಅ. 15: ವಾಯುಭಾರ ಕುಸಿತದಿಂದ ಕಳೆದ ಮೂರು-ನಾಲ್ಕು ದಿನಗಳಿಂದ ರಾಜ್ಯದ ಕೆಲವಡೆ ಹೆಚ್ಚಿನ ಮಳೆಯಾಗುತ್ತಿದೆ. ವಿಶೇಷವಾಗಿ ಭೀಮಾ ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ನದಿಯ ಪಾತ್ರದ ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿವೆ. ಈಗಾಗಲೇ. ಜಿಲ್ಲಾಡಳಿತಗಳು ಮುಂಜಾಗ್ರತೆ ಕ್ರಮವಾಗಿ ಅಪಾಯದಲ್ಲಿರುವ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ವೈ. ಹೇಳಿದ್ದಾರೆ.
ಜನರ ಸುರಕ್ಷತೆಗಾಗಿ ಕೇಂದ್ರ. ಸರ್ಕಾರ ವತಿಯಿಂದ ಕಲಬುರಗಿಯಲ್ಲಿ-2, ಯಾದಗಿರಿಯಲ್ಲಿ-2 ಮತ್ತು ರಾಯಚೂರಿನಲ್ಲಿ-1 ಎನ್.ಡಿ.ಆರ್.ಎಫ್ ತಂಡಗಳು. ಈಗಾಗಲೇ. ಕಾರ್ಯನಿರ್ವಹಿಸುತ್ತಿವೆ… ಹೆಚ್ಚುವರಿಯಾಗಿ ಇನ್ನೂ ಎರಡು ತಂಡಗಳನ್ನು ಅದರಲ್ಲಿ ಒಂದು ತಂಡವನ್ನು ಕಲಬುರಗಿ ಮತ್ತು ಯಾದಗಿರಿ. ಜಿಲ್ಲೆಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರ ಸಂರಕ್ಷಣೆಗಾಗಿ ಎರಡು. ಹೆಲಿಕ್ಯಾಪಟ್ಟರ್‌ಗಳನ್ನು ಸಹ ಬೀದರ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತಿದೆ.
ಈಗಾಗಲೇ ಪ್ರವಾಹದಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಹೆಚ್ಚಿನ ನಿಗಾವಹಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ನಾಳೆ 16ರಂದು ಬೆಳಿಗ್ಗೆ ಪ್ರವಾಹ ಪೀಡಿತ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಪಂಚಾಯತ್ ಇವರೊಂದಿಗೆ ವಿಡಿಯೋ ಕಾನ್‌ಫರೆನ್ಸ್ ಮುಖಾಂತರ, ಸಭೆಯನ್ನು ನಡೆಸಲಾಗುವುದು. ಮಳೆ ನಿಂತ ನಂತರ. ಹಾನಿಯ ಬಗ್ಗೆ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ವೈ. ಹೇಳಿದ್ದಾರೆ.

LEAVE A REPLY

Please enter your comment!
Please enter your name here