ಕಲಬುರಗಿ, ಅ. 15: ಜಿಲ್ಲೆಯ ಭೀಮಾನದಿಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಜಿಲ್ಲಾಮಟ್ಟದ ಅಧಿಕಾರಿಗಳು ರಾತ್ರಿಪೂರ್ತಿ ಕರ್ತವ್ಯ ನಿರ್ವಹಣೆ. ಮಿನಿವಿಧಾನಸೌಧದಲ್ಲಿ ಇಡೀರಾತ್ರಿ ಇದ್ದು ಪರಿಸ್ಥಿತಿ ನಿಭಾಯಿಸಲು ಸೂಚನೆ ಜಿಲ್ಲಾಧಿಕಾರಿಗಳ ಸೂಚನೆ.
ತಹಸೀಲ್ದಾರ್,ಪಿಡಿಓ, ಗ್ರಾಮಲೆಕ್ಕಿಗ ರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲು ಸಲಹೆ ನೀಡಿದ್ದು, ಪ್ರವಾಹಕ್ಕೀ ಡಾಗುವ ಗ್ರಾಮಗಳ ಸ್ಥಳಾಂತರಕ್ಕೆ ೆ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತುಸಭೆ ಕರೆದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಸೂಚನೆ ನೀಡಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಭಾಯಿಸಲು 40 ರಿಂದ 50 ಬೋಟ್‌ಗಳು, ತುರ್ತು ಸೇವೆಗಾಗಿ ಅಂಬ್ಯುಲೆನ್ಸ್ಗಳ, ಕ್ರೂಸರ್ ವಾಹನಗಳ ವ್ಯವಸ್ಥೆಗೆ ಕ್ರಮ ಹಾಗೂ ಪ್ರವಾಹ ಸಂತ್ರಸ್ತರಿಗೆ ಆಹಾರ, ಔಷಧಗಳ ಕಿಟ್ ನೀಡಲು ಸೂಚನೆ ನೀಡಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿವಿಧ ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಿದ್ದಾರೆ.